Home ಟಾಪ್ ಸುದ್ದಿಗಳು ಮುಲ್ಲಪೆರಿಯಾರ್ ಅಣೆಕಟ್ಟಿನ ಸುರಕ್ಷತೆಗೆ ತಕ್ಷಣ ಗಮನ ಹರಿಸಬೇಕು: ಸುಪ್ರೀಂ ಕೋರ್ಟ್

ಮುಲ್ಲಪೆರಿಯಾರ್ ಅಣೆಕಟ್ಟಿನ ಸುರಕ್ಷತೆಗೆ ತಕ್ಷಣ ಗಮನ ಹರಿಸಬೇಕು: ಸುಪ್ರೀಂ ಕೋರ್ಟ್

ನವದೆಹಲಿ: 126 ವರ್ಷಗಳಷ್ಟು ಹಳೆಯದಾದ ಮುಲ್ಲಪೆರಿಯಾರ್ ಅಣೆಕಟ್ಟಿನ ಸುರಕ್ಷತೆಗೆ ‘ತಕ್ಷಣದ ಗಮನ’ ನೀಡಬೇಕಾಗಿದೆ ಮತ್ತು ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರದಿಂದ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಮೇಲ್ವಿಚಾರಣಾ ಸಮಿತಿಯನ್ನು ಬಲಪಡಿಸಲಾಗುವುದು ಎಂದು ಸುಪ್ರೀಂ ಕೋರ್ಟ್  ಹೇಳಿದೆ.

“ಇಂದು, ಅಸ್ತಿತ್ವದಲ್ಲಿರುವ ಅಣೆಕಟ್ಟಿನ ಸುರಕ್ಷತೆಗೆ ತಕ್ಷಣದ ಗಮನವನ್ನು ನೀಡಬೇಕಾಗಿದೆ, ಇದಕ್ಕಾಗಿ ಅಣೆಕಟ್ಟು ಸುರಕ್ಷತಾ ಕಾಯಿದೆ 2021 ರ ಅಡಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲು ಮೇಲ್ವಿಚಾರಣಾ ಸಮಿತಿಯನ್ನು ಬಲಪಡಿಸಲಾಗುವುದು ” ಎಂದು ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠವು ಗುರುವಾರ ಹೇಳಿದೆ.

ನೀರು ಸುರಕ್ಷಿತವಾಗಿ ಹರಿಯುವಂತೆ’ ಎರಡೂ ರಾಜ್ಯಗಳಿಗೆ ಮನವಿ ಮಾಡಿದ ಸುಪ್ರೀಂ ಕೋರ್ಟ್, ಶುಕ್ರವಾರ ಈ ವಿಷಯದಲ್ಲಿ ಆದೇಶವನ್ನು ನೀಡುವುದಾಗಿ ಹೇಳಿದೆ.

Join Whatsapp
Exit mobile version