Home ಕರಾವಳಿ ಪ್ರತಿಭಾ ಕುಳಾಯಿಯನ್ನು ಅಶ್ಲೀಲವಾಗಿ ನಿಂದಿಸಿದ ಕಹಳೆ ನ್ಯೂಸ್ ಸಂಪಾದಕ ಶ್ಯಾಮ್ ಭಟ್ ನ್ನು ಕೂಡಲೇ ಬಂಧಿಸಿ:...

ಪ್ರತಿಭಾ ಕುಳಾಯಿಯನ್ನು ಅಶ್ಲೀಲವಾಗಿ ನಿಂದಿಸಿದ ಕಹಳೆ ನ್ಯೂಸ್ ಸಂಪಾದಕ ಶ್ಯಾಮ್ ಭಟ್ ನ್ನು ಕೂಡಲೇ ಬಂಧಿಸಿ: ವಿಮೆನ್ ಇಂಡಿಯಾ ಮೂವ್ಮೆಂಟ್

ಮಂಗಳೂರು: ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರೋಧಿ ಹೋರಾಟಗಾರ್ತಿ ಮತ್ತು ಬಿಲ್ಲವ ನಾಯಕಿ ಪ್ರತಿಭಾ ಕುಳಾಯಿ ಯನ್ನು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ನಿಂದಿಸಿದ ಸಂಘಪರಿವಾರದ ಮುಖವಾಣಿ ಕಹಳೆ ನ್ಯೂಸ್ ವೆಬ್ ಪೋರ್ಟಲ್ ‌ಸಂಪಾದಕ ಶ್ಯಾಮ್ ಭಟ್ ನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಬಂಧಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹನಾ ಬಂಟ್ವಾಳ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಝಹನಾ ರವರು ಶ್ಯಾಮ್ ಭಟ್ ಎಂಬಾತ ಕಹಳೆ ನ್ಯೂಸ್ ಎಂಬ ತನ್ನ ವೆಬ್ ಪೋರ್ಟಲ್ ಮೂಲಕ ಈ ಹಿಂದೆಯು ಅನೇಕ ಬಾರಿ ಕೋಮು ವೈಷಮ್ಯವನ್ನು ಮೂಡಿಸುವ ಮತ್ತು ಬಿಜೆಪಿ ಸಂಘಪರಿವಾರವನ್ನು ವಿರೋಧಿಸುವವರ ವೈಯುಕ್ತಿಕ ತೇಜೋವದೆಯನ್ನು ಮಾಡುವ ಕೆಲಸವನ್ನು ಮಾಡಿದ್ದಾನೆ.ಈತನ ವಿರುದ್ಧ ಪೋಲಿಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳದೆ ಇರುವುದರಿಂದ ಈತನ ಕೆಟ್ಟ ಚಾಳಿ ಮುಂದುವರಿಸಿದ್ದಾನೆ.ಅದೇ ರೀತಿ ಬಿಜೆಪಿ ಸರ್ಕಾರದ ಪ್ರಭಾವಿ ಸಚಿವರುಗಳು ಸಂಸದರ ಆಪ್ತ ವಲಯದಲ್ಲಿ ಗುರುತಿಸಿರುವುದರಿಂದ  ನಾನೇನು ಮಾಡಿದರು ನಡೆಯುತ್ತದೆ ಎಂಬ ಧೈರ್ಯ ಇರುವುದರಿಂದಲೇ ಈ ಬಾರಿ ಪ್ರತಿಭಾ ಕುಳಾಯಿ ವಿರುದ್ಧ ಅಶ್ಲೀಲವಾಗಿ ನಿಂದಿಸಿದ್ದಾನೆ.

ಬಾಯಿ ತೆರೆದರೆ ಸದಾ ಮಹಿಳೆಯರನ್ನು ಮಾತೆ ಮಾತೆ ಎಂದು ಕರೆಯುವ ಬಿಜೆಪಿ ಸಂಘಪರಿವಾರದ ನಾಯಕರು ಈತನ ಪೋಸ್ಟ್ ವಿರುದ್ಧ ಯಾಕೆ ತುಟಿ ಬಿಚ್ಚಿಲ್ಲ?  ನಿಮಗೆ ಮಹಿಳೆಯರ ಮೇಲಿರುವ ಗೌರವ ಇಷ್ಟೇನಾ? ಅಥವಾ ಬಿಜೆಪಿಯಲ್ಲಿರುವ ಮಹಿಳೆಯರು ಮಾತ್ರ ನಿಮಗೆ ಮಾತೆಯ ಸಮಾನ ಉಳಿದ‌ ಮಹಿಳೆಯರೆಲ್ಲಾರು ಕಸಕ್ಕೆ ಸಮಾನವಾ ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version