Home ಟಾಪ್ ಸುದ್ದಿಗಳು ಇಮಾಮ್ಸ್ ಕೌನ್ಸಿಲ್ ಜನರಲ್ ಕೌನ್ಸಿಲ್ ಸಭೆ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಅಹ್ಮದ್ ಬೇಗ್ ನದ್ವಿ ನೇಮಕ

ಇಮಾಮ್ಸ್ ಕೌನ್ಸಿಲ್ ಜನರಲ್ ಕೌನ್ಸಿಲ್ ಸಭೆ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಅಹ್ಮದ್ ಬೇಗ್ ನದ್ವಿ ನೇಮಕ

ಹೈದರಾಬಾದ್: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರೀಯ ಸಮಿತಿಯ ಜನರಲ್ ಕೌನ್ಸಿಲ್ ಸಭೆ ಇತ್ತೀಚೆಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಂದ್ಯಾಲ್ ಮುಬಾರಕ್ ಫಂಕ್ಷನ್ ಹಾಲ್ ನಲ್ಲಿ ನಡೆಯಿತು.

ದೇಶದ ಇಪ್ಪತ್ತ ನಾಲ್ಕು ರಾಜ್ಯಗಳಿಂದ ಭಾಗವಹಿಸಿದ ಉಲೆಮಾ ಇಮಾಮ್ಸ್ ಪ್ರತಿನಿಧಿಗಳ ಸಮಾವೇಶವನ್ನು ರಾಷ್ಟ್ರೀಯ ಅಧ್ಯಕ್ಷ ಹಝ್ರತ್ ಮೌಲಾನಾ ಮುಹಮ್ಮದ್ ಅಹ್ಮದ್ ಬೇಗ್ ನದ್ವೀ ಲಕ್ನೋ ಧ್ವಜಾರೋಹಣ ಮೂಲಕ ಉದ್ಘಾಟಿಸಿದರು.

ನಂತರ ನಡೆದ ಕಾರ್ಯಕ್ರಮಗಳನ್ನು ಮೌಲಾನಾ ನಿಝಾರುದ್ದೀನ್ ಖಾಸಿಮಿ ಕೇರಳ ಮತ್ತು ಮೌಲಾನಾ ಕಲೀಮುಲ್ಲಾ ಹಝ್ರತ್ ಕರ್ನಾಟಕ ನಡೆಸಿಕೊಟ್ಟರು.

2022 ರಿಂದ 2025ರವರೆಗಿನ ನೂತನ ರಾಷ್ಟ್ರೀಯ ಸಮಿತಿ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಹಝ್ರತ್ ಮೌಲಾನಾ ಮುಹಮ್ಮದ್ ಅಹ್ಮದ್ ಬೇಗ್ ನದ್ವೀ ಲಕ್ನೋ, ಉಪಾಧ್ಯಕ್ಷರಾದ ಮುಫ್ತಿ ಹನೀಫ್ ಅಹರಾರ್ ಅಲ್ ಖಾಸಿಮೀ ಗೋವಾ, ಡಾಕ್ಟರ್ ಶಾಹುಲ್ ಹಮೀದ್ ಬಾಖವೀ ಚೆನ್ನೈ ತಮಿಳುನಾಡು, ಪ್ರಧಾನ ಕಾರ್ಯದರ್ಶಿಗಳಾದ  ಮೌಲಾನಾ ಫೈಝಲ್ ಅಶ್ರಫೀ ಮಲಪ್ಪುರಮ್ ಕೇರಳ, ಮೌಲಾನಾ ಅತೀಕುರಹ್ಮಾನ್ ಅಶ್ರಫೀ ಗುಲ್ಬರ್ಗಾ ಕರ್ನಾಟಕ, ಕಾರ್ಯದರ್ಶಿಗಳಾದ ಮೌಲಾನಾ ಮಿನಾರುಲ್ ಶೈಖ್ ಪಶ್ಚಿಮ ಬಂಗಾಳ, ಮೌಲಾನಾ ಅಬ್ದುಲ್ ಸಮದ್ ನದ್ವೀ ರಾಜಸ್ಥಾನ, ಕೋಶಾಧಿಕಾರಿಗಳಾದ ಉಸ್ತಾದ್ ಕರಮನ ಅಶ್ರಫ್ ಬಾಖವೀ ಕೇರಳ, ಸದಸ್ಯರಾಗಿ ಮೌಲಾನಾ ನಿಝಾರ್ ಅಹ್ಮದ್ ಖಾಸಿಮೀ ಕೇರಳ, ಜಾಫರ್ ಸಾದಿಕ್ ಫೈಝೀ ಮಂಗಳೂರು ಕರ್ನಾಟಕ, ಆಬಿರುದ್ದೀನ್ ಮಂಬಯಿ ತಮಿಳುನಾಡು, ಮುಹಮ್ಮದ್ ವಶೀಮ್ ಮದನಿ ಬಿಹಾರ, ಮುಫ್ತಿ ಅಬ್ದುಲ್ ಸುಬಹಾನ್ ಖಾಸಿಮೀ ಆಂಧ್ರಪ್ರದೇಶ, ಮೌಲಾನಾ ರಫೀಕ್ ರಶಾದೀ ಹೈದರಾಬಾದ್, ಮೌಲಾನಾ ನಾಸಿರುದ್ದೀನ್ ಮಝಾಹಿರೀ ಮಣಿಪುರ, ಮೌಲಾನಾ ಅರ್ಶದ್ ನದ್ವೀ ಕೇರಳ ಅವರನ್ನು ಆಯ್ಕೆ ಮಾಡಲಾಯಿತು.

ಸಮಾರೋಪ ಭಾಷಣ ನಡೆಸಿದ ರಾಷ್ಟ್ರೀಯ ಅಧ್ಯಕ್ಷ ಹಝ್ರತ್ ಮೌಲಾನಾ ಮುಹಮ್ಮದ್ ಅಹ್ಮದ್ ಬೇಗ್ ನದ್ವೀ ಲಕ್ನೋ ಮಾತನಾಡಿ, ಭಾರತ ದೇಶ ಹಿಂದುತ್ವ ಫ್ಯಾಶಿಸ್ಟ್ ರಾಷ್ಟ್ರವಾದಿ ಸಂಘಪರಿವಾರದವರಿಂದ ಎದುರಿಸುತ್ತಿರುವ ಬೆದರಿಕೆ ಸವಾಲುಗಳನ್ನು ಅರ್ಥ ಮಾಡಿಕೊಂಡು ಕಾರ್ಯಪ್ರವೃತರಾಗಬೇಕು. ದೇಶದ ಶಾಂತಿ ಸೌಹಾರ್ದತೆಯನ್ನು ಜಾತ್ಯತೀತ ಪ್ರಜಾಪ್ರಭುತ್ವ ಸಂವಿಧಾನದ ಆಶಯವನ್ನು ಎತ್ತಿ ಹಿಡಿದು ಇಸ್ಲಾಮಿನ ಜೀವನ ಮಾರ್ಗವನ್ನು ಎಲ್ಲಾ ಜನರಿಗೂ ಪ್ರಚಾರಪಡಿಸುವ ಮತ್ತು ತಲುಪಿಸುವ ಜವಾಬ್ದಾರಿಯನ್ನು ಕರ್ತವ್ಯ ಪ್ರಜ್ಞೆಯೊಂದಿಗೆ ನಿರ್ವಹಿಸಬೇಕು ಎಂದರು.

ದೇಶವನ್ನು ಬಲಿಷ್ಠಗೊಳಿಸುವ ಮತ್ತು ಹಿಂದುತ್ವ ಫ್ಯಾಶಿಸ್ಟ್ ಭಯೋತ್ಪಾದನೆಯಿಂದ ಕಾಪಾಡುವ ಬಗ್ಗೆ ಸಮಾಜಕ್ಕೆ ಸರಿಯಾದ ಮಾರ್ಗದರ್ಶನವನ್ನು ನೀಡುತ್ತಾ ಇಮಾಮ್ಸ್ ಗಳು ಭಾಷಣ ಬರಹಗಳ ಮೂಲಕ ನಿರಂತರವಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ದೇಶ ಸ್ವಾತಂತ್ರ್ಯ ಹೋರಾಟದಲ್ಲೂ ಇತರ ಸಂದರ್ಭಗಳಲ್ಲೂ ನಮ್ಮ ಪೂರ್ವಿಕರಾದ ಉಲೆಮಾಗಳು, ಇಮಾಮ್ ಗಳು ತೋರಿಸಿ ಕೊಟ್ಟ ನ್ಯಾಯಪರವಾದ ಹೋರಾಟವನ್ನು ನಾವು ಮೈಗೂಡಿಸಿಕೊಂಡು ಮಾದರಿ ಆಗಬೇಕು ಎಂದು ಉಪದೇಶ ನೀಡಿದರು. ಪ್ರಧಾನ ಕಾರ್ಯದರ್ಶಿ ಮೌಲಾನಾ ಅತೀಕುರಹ್ಮಾನ್ ಅಶ್ರಫೀ ಕರ್ನಾಟಕ ಕೃತಜ್ಞತೆ ಸಲ್ಲಿಸಿದರು.

Join Whatsapp
Exit mobile version