Home ಟಾಪ್ ಸುದ್ದಿಗಳು ಹೆಡ್ ಬುಷ್ ವಿವಾದ: ‘AM READY TO FACE’ ಸಂಘಪರಿವಾರಕ್ಕೆ ಅಗ್ನಿ ಶ್ರೀಧರ್ ಸವಾಲು !

ಹೆಡ್ ಬುಷ್ ವಿವಾದ: ‘AM READY TO FACE’ ಸಂಘಪರಿವಾರಕ್ಕೆ ಅಗ್ನಿ ಶ್ರೀಧರ್ ಸವಾಲು !

►ನಾನು ಸುಮ್ಮನಿದ್ದೇನೆ ಎಂದು ಕೆಣಕಲು ಬರಬೇಡಿ ಎಂದ ‘ಅಗ್ನಿ

ಬೆಂಗಳೂರು: ರಾಜ್ಯಾದ್ಯಂತ ರಿಲೀಸ್ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡಾಲಿ ಧನಂಜಯ್ ಅಭಿನಯದ ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂಬ ಸಂಘಪರಿವಾರದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಲೇಖಕ ಅಗ್ನಿ ಶ್ರೀಧರ್, ನಾನು ಸಂವಾದ ಹಾಗೂ ಜಗಳ ಎರಡಕ್ಕೂ ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.


ಹೆಡ್ ಬುಷ್ ಚಿತ್ರದ ಕುರಿತಂತೆ ಖಾಸಗಿ ಸುದ್ದಿವಾಹಿನಿ ಜೊತೆಗೆ ಮಾತನಾಡಿದ ಅಗ್ನಿ ಶ್ರೀಧರ್, ಚಿತ್ರ ನಟ ಧನಂಜಯ್ ಕೇವಲ ನಟ ಹಾಗೂ ನಿರ್ಮಾಣ ಮಾಡಿದ್ದಾರೆ. ಸಂಘಪರಿವಾರದವರು ಸುಮ್ಮನೆ ವಿವಾದ ಮಾಡುತ್ತಿದ್ದಾರೆ. ನಾನು ದ್ರಾವಿಡ, ಈ ದೇಶದ ಮೂಲ ನಿವಾಸಿ. ನಾನು ಯಾವುದೇ ವಿವಾದವನ್ನು ಎದುರಿಸಲು ಸಿದ್ಧನಾಗಿದ್ದೇನೆ ಎಂದು ಸಂಘಪರಿವಾರಕ್ಕೆ ಸವಾಲು ಹಾಕಿದ್ದಾರೆ.


ಇನ್ನು ಈ ಚಿತ್ರದಲ್ಲಿ ನನಗೆ ಗೊತ್ತಿರೋ ವಿಚಾರಗಳ ಬಗ್ಗೆ ಬರೆದಿದ್ದೇನೆ, ಅದನ್ನೇ ನಾವು ತೋರಿಸಿದ್ದೇವೆ. ಆದರೆ ನಮಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ. ಏಕೆಂದರೆ ನಮಗೂ ಹಲವು ಸಾದ್ವಿಗಳು ಕರೆ ಮಾಡಿ ಮಾತನಾಡಿದ್ದಾರೆ. ಆ ಪದ ಬರಲಿಲ್ಲ ಎಂದರೇ, ಕರಗ ಮಹತ್ವದ ಬಗ್ಗೆ ಹೇಳಲು ಆಗುತ್ತಿರಲಿಲ್ಲ. ಆದರೆ ನಮ್ಮ ಹೆದರಿಸಲು ಬರಬೇಡಿ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ, ಚರ್ಚೆ ಮಾಡೋಣಾ.. ಸಿನಿಮಾದಲ್ಲಿ ಒಂದು ಅಂಶ ಸೇರಿಸೋದು, ತೆಗೆಯೋದು ಸುಲಭದ ಕೆಲಸವಲ್ಲ. ಆದ್ದರಿಂದಲೇ ಅವರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಸಿನಿಮಾವನ್ನು ಸಿನಿಮಾ ಆಗಿ ಮಾತ್ರ ನೋಡಿ, ಯಾರನ್ನು ನೋವಿಸುವ ಉದ್ದೇಶ ನಮಗೆ ಇಲ್ಲ ಎಂದು ತಿಳಿಸಿದರು.

Join Whatsapp
Exit mobile version