ದೇವನಹಳ್ಳಿ : ವೃದ್ಧರೊಬ್ಬರು ಲಸಿಕೆ ಹಾಕಬೇಡಿ ಎಂದು ಆರೋಗ್ಯ ಸಿಬ್ಬಂದಿಗೆ ಆವಾಝ್ ಹಾಕಿರುವ ಘಟನೆ ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ ನಡೆದಿದೆ.
ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಜನರಿಗೆ ಲಸಿಕೆ ಹಾಕುತ್ತಿದ್ದಾರೆ. ಈ ವೇಳೆ ಲಸಿಕೆ ಹಾಕಿಸಿಕೊಳ್ಳಲು ವೃದ್ಧರೊಬ್ಬರು ಹಿಂದೇಟು ಹಾಕಿದ್ದು, ಸಿಬ್ಬಂದಿಗೆ ಆವಾಜ್ ಹಾಕಿದ್ದಾರೆ.
ನಾವು ಮನೆಯಲ್ಲಿರುವವರು, ಇಬ್ಬರಿಗೂ ವಯಸ್ಸಾಗಿದೆ. ಒಂದು ವೇಳೆ ಲಸಿಕೆ ಹಾಕಿಸಿಕೊಂಡು ಆರೋಗ್ಯದಲ್ಲಿ ಏರುಪೇರಾದರೆ ನಮ್ಮನ್ನು ನೋಡಿಕೊಳ್ಳುವವರು ಯಾರು?, ಕೊರೊನಾ ಬಂದು ಸತ್ರೂ ಪರ್ವಾಗಿಲ್ಲ, ಲಸಿಕೆ ಮಾತ್ರ ಹಾಕಿಸಿಕೊಳ್ಳುವುದಿಲ್ಲವೆಂದು ಹಠ ಹಿಡಿದ್ದಾರೆ.
ನೀವು ಲಸಿಕೆ ಹಾಕಿಸಿಕೊಳ್ಳದಿದ್ದರೆ ರೇಷನ್ ಕಟ್ ಮಾಡುತ್ತೇವೆ ಎಂದಿದ್ದಕ್ಕೆ ನೀವು ರೇಷನ್ ಕಟ್ ಮಾಡಿದರೆ ನಾವು ವೋಟ್ ಹಾಕುವುದಿಲ್ಲ ಎಂದು ವೃದ್ಧ ಅವಾಝ್ ಹಾಕಿ ಕಳುಹಿಸಿದ್ದಾರೆ.