Home ಕರಾವಳಿ ಪುದು ಗ್ರಾ.ಪಂ.ಚುನಾವಣೆಯಲ್ಲಿ ಎಸ್’ಡಿಪಿಐಗೆ ಭರ್ಜರಿ ಗೆಲುವು: ಮತದಾರರಿಗೆ ಇಲ್ಯಾಸ್ ತುಂಬೆ ಕೃತಜ್ಞತೆ

ಪುದು ಗ್ರಾ.ಪಂ.ಚುನಾವಣೆಯಲ್ಲಿ ಎಸ್’ಡಿಪಿಐಗೆ ಭರ್ಜರಿ ಗೆಲುವು: ಮತದಾರರಿಗೆ ಇಲ್ಯಾಸ್ ತುಂಬೆ ಕೃತಜ್ಞತೆ

ಬಂಟ್ವಾಳ: ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್’ಡಿಪಿಐ 7 ವಾರ್ಡ್’ಗಳಲ್ಲಿ ಜಯಗಳಿಸಿ, ಅಭೂತಪೂರ್ವ ಸಾಧನೆ ಮಾಡಿದೆ. ಈ ಜಯಕ್ಕೆ ಕಾರಣರಾದ ಮತದಾರರು, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಎಸ್’ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.


ಎಸ್’ಡಿಪಿಐ ತುಂಬು ಹೃದಯದಿಂದ ಜನರ ಸೇವೆ ಮಾಡಲು ಬದ್ಧವಾಗಿದೆ. ನಮ್ಮ ಕಾರ್ಯಕರ್ತರು, ನಾಯಕರು ಮತ್ತು ಬೆಂಬಲಿಗರ ಕಠಿಣ ಪರಿಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ ಎಸ್’ಡಿಪಿಐ ಮೇಲೆ ಭರವಸೆ ಇಟ್ಟು ಗೆಲ್ಲಿಸಿದ ಮತದಾರರ ನಿರೀಕ್ಷೆಯನ್ನು ಸಾಕಾರಗೊಳಿಸಲು ಪಕ್ಷ ಪ್ರಯತ್ನಿಸಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version