ಮಂಗಳೂರು: ದನದ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಉಳ್ಳಾಲ ಪೊಲೀಸರು ನಾಲ್ಕು ಮಂದಿಯನ್ನು ಗುರುವಾರ ತಲಪಾಡಿಯಲ್ಲಿ ಬಂಧಿಸಿದ್ದಾರೆ.
ಹುಸೈನ್, ಮುಝಮ್ಮಿಲ್, ಅಮೀನ್, ಶುಹೈಬ್ ಅಕ್ತರ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಪಡೆದ ಪೊಲೀಸರು ತಲಪಾಡಿ ಬಳಿ ಕಾರು ಸಹಿತ ಮಾಂಸವನ್ನು ವಶಪಡಿಸಿದ್ದಾರೆ.