Home ಟಾಪ್ ಸುದ್ದಿಗಳು ಮೋದಿ ಸರ್ಕಾರದ ಇಸ್ಲಾಮೋಫೋಬಿಯಾ: ಅಮೆರಿಕನ್ ಸರ್ಕಾರದ ಮೌನ ಪ್ರಶ್ನಿಸಿದ ಸಂಸದೆ ಇಲ್ಹಾನ್ ಉಮರ್

ಮೋದಿ ಸರ್ಕಾರದ ಇಸ್ಲಾಮೋಫೋಬಿಯಾ: ಅಮೆರಿಕನ್ ಸರ್ಕಾರದ ಮೌನ ಪ್ರಶ್ನಿಸಿದ ಸಂಸದೆ ಇಲ್ಹಾನ್ ಉಮರ್

ವಾಷಿಂಗ್ಟನ್: ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ದೀರ್ಘಕಾಲದಿಂದ ಅಭಿಯಾನದ ಮೂಲ ಇಸ್ಲಾಮೋಫೋಬಿಯಾವನ್ನು ಹರಡುತ್ತಿರುವ ಮೋದಿ ಸರ್ಕಾರದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮೌನವಹಿಸಿರುವ ನಡೆಯನ್ನು ಕಾಂಗ್ರೆಸ್ ಸದಸ್ಯೆ ಇಲ್ಹಾನ್ ಉಮರ್ ಖಾರವಾಗಿ ಪ್ರಶ್ನಿಸಿದ್ದಾರೆ.

ಬಹಿರಂಗ ಮತ್ತು ಮುಕ್ತವಾಗಿ ದ್ವೇಷ ಹರಡುತ್ತಿರುವ ಭಾರತದ ಪ್ರಧಾನಿ ಮೋದಿ ಸರ್ಕಾರವನ್ನು ಅಮೆರಿಕ ಹೇಗೆ ಬೆಂಬಲಿಸುತ್ತದೆ ಎಂದು ಜೋ ಬೈಡೆನ್ ಅವರ ಉಪ ಕಾರ್ಯದರ್ಶಿ ವೆಂಡಿ ಶೆರ್ಮನ್ ಅವರನ್ನು ಇಲ್ಹಾನ್ ಉಮರ್ ಪ್ರಶ್ನಿಸಿದ್ದಾರೆ.

ಮೋದಿ ಆಡಳಿತದಲ್ಲಿ ಅಲ್ಲಿನ ಅಲ್ಪಸಂಖ್ಯಾತರ ವಿರುದ್ಧ ತೆಗೆಯುತ್ತಿರುವ ಕ್ರಮವನ್ನು ಬಹಿರಂಗವಾಗಿ ಟೀಕಿಸಲು ನಾವು ಏನು ಮಾಡಬೇಕೆಂದು ಅವರು ಪ್ರಶ್ನಿಸಿದ್ದಾರೆ.

ಅಮೆರಿಕದ ಆಡಳಿತವು ಪ್ರತಿಯೊಂದು ಧರ್ಮ, ಜನಾಂಗ, ಸಿದ್ಧಾಂತ, ಈ ಜಗತ್ತಿನ ವೈವಿಧ್ಯತೆಯ ಪ್ರತಿ ಗುಣದೊಂದಿಗೆ ನಿಲ್ಲಬೇಕು ಎಂಬುದನ್ನು ತಾನು ಒಪ್ಪುತ್ತೇನೆ ಎಂದು ಶೆರ್ಮನ್ ತಿಳಿಸಿದ್ದಾರೆ.

ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿದ ಇಲ್ಹಾನ್ ಉಮರ್, ನಾವು ಮಿತ್ರರಾಷ್ಟ್ರಗಳಿಗೂ ಮಾತ್ರವಲ್ಲ ವಿರೋಧಿಗಳ ಜೊತೆಗೂ ನಿಲ್ಲಬೇಕೆಂದು ತಿಳಿಸಿದ್ದಾರೆ.

ಮಾನವ ಹಕ್ಕುಗಳ ಉಲ್ಲಂಘಣೆಯ ಕುರಿತು ಮೋದಿ ಸರ್ಕಾರವನ್ನು ಟೀಕಿಸಲು ಯಾಕೆ ಹಿಂಜರಿಯುತ್ತಿದೆ ಎಂದು ಟ್ವೀಟ್ ಮೂಲಕ ಜೋ ಬೈಡೆನ್ ಸರ್ಕಾರವನ್ನು ಅವರು ಪ್ರಶ್ನಿಸಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version