ಆಂಧ್ರಪ್ರದೇಶ: ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯಲು ತೆರಳಿದ್ದ ವೇಳೆ ಹೃದಯಾಘಾತದಿಂದ ಪರೀಕ್ಷಾ ಕೇಂದ್ರದಲ್ಲೇ ಸಾವನ್ನಪ್ಪಿರುವ ಘಟನೆ ತಿರುಪತಿ ದಿಲ್ಲೆಯ ಗುದುರ್ ಪಟ್ಟಣದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಇಂಟರ್ ಮಿಡಿಯೇಟ್ ದ್ವಿತೀಯ ವರ್ಷದ ಪರೀಕ್ಷೆ ಬರೆಯಲು ತೆರಳಿದ್ದ.
ಮೃತನನ್ನು ಗುದುರ್ ಪಟ್ಟಣದ ಶ್ರೀ ಸ್ವರ್ಣಂಧರ ಭಾರತಿ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿ ವೆಂಕಟ ಸತೀಶ್ ಎಂದು ಗುರುತಿಸಲಾಗಿದ್ದು, ಇಂಟರ್ ಮಿಡಿಯೇಟ್ ನ ಇಂಗ್ಲೀಷ್ ಪತ್ರಿಕೆ ಪರೀಕ್ಷೆ ಬರೆಯಲು ಕಾಲೇಜಿಗೆ ತೆರಳಿದ್ದಾನೆ.
ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಸತೀಶ್’ಗೆ ಎದೆಯ ಎಡ ಭಾಗ ಸ್ವಲ್ಪ ನೋವಾಗುತ್ತಿರುವುದಾಗಿ ಪೊಲೀಸರೊಂದಿಗೆ ತಿಳಿಸಿದ್ದಾನೆ, ಬಳಿಕ ಸ್ವಲ್ಪ ಸಮಯ ಕುಳಿತುಕೊಳ್ಳುವಂತೆ ಸೂಚಿಸಿದ್ದಾರೆ. ಇದಾದ ಕೆಲ ಸಮಯದ ಬಳಿಕ ಸತೀಶ್’ಗೆ ಉಸಿರಾಟದ ತೊಂದರೆ ಉಂಟಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.