Home ಗಲ್ಫ್ ಐ.ಎಫ್.ಎಫ್ ರಾಬಿಘ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರ

ಐ.ಎಫ್.ಎಫ್ ರಾಬಿಘ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರ

ಜಿದ್ದಾ: ಇಂಡಿಯಾ ಫ್ರೆಟರ್ನಿಟಿ ಫೋರಮ್ ರಾಬಿಘ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ 2021 ಅನ್ನು ರಾಬಿಘ್ ಜನರಲ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 7 ರಂದು ಹಮ್ಮಿಕೊಳ್ಳಲಾಗಿತ್ತು.

ಐ.ಎಫ್.ಎಫ್ ಅಧ್ಯಕ್ಷ ಆದಿಲ್ ಉಚ್ಚಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟೆಕ್ನಿಮೌಂಟ್ ಸಂಸ್ಥೆಯ ಪಿ.ಆರ್. ಒ ಸೌದಿ ಪ್ರಜೆ ಸಾಲೇಮ್ ಅಲ್ ಬೆಲಾದಿ ಅವರು ಸ್ವತಃ ರಕ್ತದಾನ ಮಾಡುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಐ.ಎಫ್.ಎಫ್ ರಾಬಿಘ್ ವತಿಯಿಂದ ನಡೆದ ಈ ಶಿಬಿರದಲ್ಲಿ 75 ಮಂದಿ ಭಾಗವಹಿಸಿ, 43 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ರಾಬಿಘ್ ಜನರಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಶಹಾಬ್ದುಲ್ ಹಕ್, ಐ.ಎಫ್.ಎಫ್ ರಾಬಿಘ್ ಕಾರ್ಯದರ್ಶಿ ಆರೀಸ್ ಪಲಿಮಾರ್, ಐ.ಎಫ್.ಎಫ್ ರಾಬಿಘ್ ಪಿ.ಆರ್.ಒ ಅಬ್ದುಲ್ ಮುತಲಿಬ್ ಶಿವಮೊಗ್ಗ ಎಂಬವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಐ.ಎಫ್.ಎಫ್ ನ ಆಸೀಫ್ ಮೂಳೂರು ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು.

Join Whatsapp
Exit mobile version