►ಮಹಿಳಾ ನೌಕರರಿಂದ ಕ್ರಮಕ್ಕೆ ಒತ್ತಾಯ
ಕೊಪ್ಪಳ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಮಹಿಳಾ ನೌಕರರಿಗೆ ರಜೆ ಬೇಕಾದರೆ ಲಾಡ್ಜ್ ಗೆ ಬನ್ನಿ ಎಂದು ಕರೆಯುತ್ತಾನೆ ಎಂದು ನೌಕರರು ಸಾಕ್ಷಿ ಸಮೇತ ದೂರು ನೀಡಿದ್ದಾರೆ.
ಅನುಕಂಪದ ಆಧಾರದಡಿ ಕೆಲಸಕ್ಕೆ ಸೇರಿರುವ ವಿಧವಾ ಮಹಿಳಾ ನೌಕರರೇ ಈತನಿಗೆ ಟಾರ್ಗೆಟ್ ಎಂದು ನೊಂದ ಮಹಿಳೆಯರು ಎಸ್ ಪಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಮಹಿಳಾ ನೌಕರರು ರಜೆ ಸೇರಿದಂತೆ ಯಾವುದೇ ಸೌಲಭ್ಯ ಬೇಕು ಎಂದರೂ ಲಾಡ್ಜ್ ಗೆ ಬಂದು ಬಟ್ಟೆ ಬಿಚ್ಚಬೇಕು ಎಂದು ಮಲ್ಲಿನಾಥ್ ಹೇಳುತ್ತಾನೆ ಎಂದು ಮಹಿಳೆಯರು ಕಷ್ಟ ಹೇಳಿಕೊಂಡಿದ್ದಾರೆ.
ಅಲ್ಲದೆ, ಎಸ್ ಪಿ ಕಚೇರಿಯಲ್ಲೇ ಸ್ವಚ್ಛತಾ ಕೆಲಸಕ್ಕೆ ಬರುವ ಡಿ ಗ್ರೂಪ್ ಮಹಿಳಾ ಸಿಬ್ಬಂದಿಯನ್ನು ಎಳೆದು ಕೊಂಡು ಚುಂಬಿಸುವ ಮತ್ತು ಅಸಭ್ಯವಾಗಿ ವರ್ತಿಸುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿರೋ ನೊಂದ ಮಹಿಳೆಯರು ಈತನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.