Home ಟಾಪ್ ಸುದ್ದಿಗಳು ಟೊಮೆಟೋ ತಿನ್ನೋದನ್ನೇ ನಿಲ್ಲಿಸಿದ್ರೆ ಬೆಲೆ ಕಡಿಮೆಯಾಗುತ್ತೆ: ಉತ್ತರ ಪ್ರದೇಶ ಸಚಿವೆ

ಟೊಮೆಟೋ ತಿನ್ನೋದನ್ನೇ ನಿಲ್ಲಿಸಿದ್ರೆ ಬೆಲೆ ಕಡಿಮೆಯಾಗುತ್ತೆ: ಉತ್ತರ ಪ್ರದೇಶ ಸಚಿವೆ

ಲಕ್ನೋ: ಟೊಮೆಟೋ ತಿನ್ನೋದನ್ನೇ ನಿಲ್ಲಿಸಿದ್ರೆ ಬೆಲೆ ಕಡಿಮೆಯಾಗುತ್ತೆ ಎಂದು ಉತ್ತರ ಪ್ರದೇಶದ ಸಚಿವೆ ಪ್ರತುಭಾ ಶುಕ್ಲಾ ಹೇಳಿದ್ದಾರೆ.


ಉತ್ತರ ಪ್ರದೇಶದಲ್ಲಿ ಸರ್ಕಾರದ ವತಿಯಿಂದ ನಡೆದ ನೆಡುತೋಪು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಟೊಮೆಟೋ ದುಬಾರಿಯಾಗಿದ್ದರೆ ಜನರು ಅದನ್ನ ತಮ್ಮ ಮನೆಯಲ್ಲೇ ಬೆಳೆಯಬೇಕು ಅಥವಾ ಟೊಮೆಟೋ ತಿನ್ನೋದನ್ನೇ ನಿಲ್ಲಿಸಬೇಕು. ಆಗ ಬೆಲೆಗಳು ಅನಿವಾರ್ಯವಾಗಿ ಇಳಿಯುತ್ತವೆ. ಟೊಮೆಟೋ ಬದಲಿಗೆ ನಿಂಬೆ ತಿನ್ನಬಹುದು. ಯಾರೂ ಟೊಮೆಟೋಗಳನ್ನ ತಿನ್ನದೇ ಇದ್ದರೆ ಬೆಲೆ ಕಡಿಮೆಯಾಗುತ್ತದೆ. ಜೊತೆಗೆ ಕುಟುಂಬದ ಆರ್ಥಿಕ ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂದು ಹೇಳಿದ್ದಾರೆ.

Join Whatsapp
Exit mobile version