ಶಿವಮೊಗ್ಗ: ಹಿಂದುತ್ವದ ಸುದ್ದಿಗೆ ಬಂದರೆ ಗಂಭೀರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಎಚ್ಚರಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶಿರಾಳಕೊಪ್ಪದಲ್ಲಿ ಚೈತ್ರಾ ಕುಂದಾಪುರ ಅವರ ಹೇಳಿಕೆಯನ್ನು ಹಿಂದೂ ಯುವಕನೊಬ್ಬ ತನ್ನ ಮೊಬೈಲ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಕ್ಕೆ ಅಂಗಡಿಗೆ ನುಗ್ಗಿ ಹೊಡೆಯುತ್ತಾರೆ ಎಂದು ಅವರಿಗೆ ಎಷ್ಟು ಸೊಕ್ಕುಇರಬೇಕು ಎಂದು ಪ್ರಶ್ನಿಸಿದರು.
ಈ ರೀತಿ ನಡೆದುಕೊಳ್ಳುವುದು ಎಲ್ಲಾ ಮುಸ್ಲಿಮರಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆದರೆ ಹೀಗೆ ನಡೆದುಕೊಳ್ಳುವ ಮುಸ್ಲಿಮರು ಎಚ್ಚರಿಕೆಯಿಂದ ಇರಬೇಕು. ಇದನ್ನು ರಾಜ್ಯದಲ್ಲಾಗಲಿ, ದೇಶದಲ್ಲಾಗಲಿ ನಡೆಯಲು ಬಿಡುವುದಿಲ್ಲ, ಹಿಂದುತ್ವದ ಸುದ್ದಿಗೆ ಬಂದರೆ ಅನುಭವಿಸುತ್ತೀರಿ ಎಂದು ಈಶ್ವರಪ್ಪ ಹೇಳಿದರು.