ಪಣಜಿ: ನಿಮಗೆ ಪೆಟ್ರೋಲ್, ಡೀಸೆಲ್ ಕೊಂಡುಕೊಳ್ಳಲು ಸಾಧ್ಯವಾಗದಿದ್ದರೆ, ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಕಾರನ್ನು ಖರೀದಿಸಿ ಎಂದು ಸಚಿವ ನಿಲೇಶ್ ಕಬ್ರಾಲ್ ಸಲಹೆ ನೀಡಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಅವರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಲು ಸರ್ಕಾರ ರಿಯಾಯಿತಿಯನ್ನು ನೀಡುತ್ತಿದೆ. ಅಷ್ಟೇ ಅಲ್ಲದೇ ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ಪರಿಸರದ ಮೇಲೆ ಹಾನಿಯೂ ಕಡಿಮೆಯಾಗಿರುತ್ತದೆ. ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಕೊಂಡುಕೊಳ್ಳಲು ಸಾಧ್ಯವಾಗದಿದ್ದರೆ ವಿದ್ಯುನ್ಮಾನ ವಾಹನಗಳನ್ನು ಬಳಸಿ ಎಂದು ಸಲಹೆ ನೀಡಿದ್ದಾರೆ.