ಉಡುಪಿ: ಹಿಜಾಬ್ ತೆಗೆದು ಬರುವವರು ಮಾತ್ರ ಕಾಲೇಜಿಗೆ ಬನ್ನಿ. ಹಿಜಾಬ್ ಹಾಕದೇ ಬರಲು ಸಿದ್ಧವಿಲ್ಲ ಎಂದಾದರೆ ಕಾಲೇಜು ಆವರಣದೊಳಗೂ ಬರಬೇಡಿ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ಸೋಮವಾರ ಕಾಲೇಜು ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ, ಪೋಷಕರು, ಉಪನ್ಯಾಸಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿಷಯಕ್ಕೆ ಸಂಬಂಧಿಸಿ ಮೊನ್ನೆ ಕಾಲೇಜು ಅಭಿವೃದ್ಧಿ ಸಮಿತಿ, ಪೋಷಕರನ್ನೊಳಗೊಂಡಿರುವ ಸಮಿತಿ, ಉಪನ್ಯಾಸಕರ ಸಭೆ ಮಾಡಿದ್ದೇವೆ. ಹಿಜಾಬ್ ಬೇಕೆನ್ನುವ ನಾಲ್ವರು ವಿದ್ಯಾರ್ಥಿನಿಯರು, ಅವರ ಪೋಷಕರನ್ನು ಕರೆದಿದ್ದೇವೆ. ನಾವು ವಿವರವಾಗಿ ಮನವಿ ಮಾಡಿದ್ದೇವೆ. ಈ ಹಂತದಲ್ಲಿ ಹಿಜಾಬ್ ಗೆ ಅವಕಾಶ ಕೊಡುವುದಕ್ಕೆ ಆಗಲ್ಲ. ಸರಕಾರ ಯಾವ ನಿರ್ಧಾರ ಮಾಡುತ್ತದೋ ಸಮಿತಿ ನಿರ್ಧಾರ ತನಕವೂ ಕಾಯಬೇಕು. ಕಾಂಪೌಂಡ್ ಆವರಣದವರೆಗೆ ಹಿಜಾಬ್ ಹಾಕಿಕೊಂಡು ಬಂದು ಕ್ಲಾಸ್ ರೂಮ್ ನಲ್ಲಿ ಹಿಜಾಬ್ ತೆಗೆದು ಹಾಜರಾಗಬೇಕು ಎಂದು ಹೇಳಿದರು.