Home ಟಾಪ್ ಸುದ್ದಿಗಳು ಭ್ರಷ್ಟಾಚಾರವನ್ನು ಪ್ರಶ್ನಿಸದೆ ಬಾಯಿಮುಚ್ಚಿ ಕೂತರೆ ಇಡೀ ದೇಶಕ್ಕೇ ಪರದೆ ಹಾಕಬೇಕಾದೀತು: ಕೇಂದ್ರದ ವಿರುದ್ಧ ನಟ ಕಿಶೋರ್...

ಭ್ರಷ್ಟಾಚಾರವನ್ನು ಪ್ರಶ್ನಿಸದೆ ಬಾಯಿಮುಚ್ಚಿ ಕೂತರೆ ಇಡೀ ದೇಶಕ್ಕೇ ಪರದೆ ಹಾಕಬೇಕಾದೀತು: ಕೇಂದ್ರದ ವಿರುದ್ಧ ನಟ ಕಿಶೋರ್ ವಾಗ್ದಾಳಿ

ಬೆಂಗಳೂರು: ಭ್ರಷ್ಟಾಚಾರವನ್ನು ಪ್ರಶ್ನಿಸದೆ ಬಾಯಿಮುಚ್ಚಿ ಕೂತರೆ ಇಡೀ ದೇಶಕ್ಕೇ ಪರದೆ ಹಾಕಬೇಕಾದೀತು ಎಚ್ಚರ ಎಂದು ನಟ ಕಿಶೋರ್ ಕುಮಾರ್ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಜಿ-20 ಶೃಂಗಸಭೆಗೆ ಕೇಂದ್ರ ಸರಕಾರ ಸಾವಿರಾರು ಕೋಟಿ ಖರ್ಚು ಮಾಡಿದೆ ಎನ್ನಲಾದ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ನಟ ಕಿಶೋರ್ ಕುಮಾರ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

ಕಿಶೋರ್ ಕುಮಾರ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್


ಭ್ರಷ್ಟಾಚಾರದ ವಿಶ್ವಗುರು –
ಜಿ 20 ಕ್ಕೆ ದೇಶ ಕೊಟ್ಟ ಬಜೆಟ್ – 900 ಕೋಟಿ
ಲೆಕ್ಕ ಕೊಟ್ಟದ್ದು – 4100 ಕೋಟಿ (ಶಾಶ್ವತ ಆಸ್ತಿ, ಸೌಕರ್ಯಗಳ ಹೆಸರಲ್ಲಿ)
ಮಥುರಾ ರೋಡಿಗೆ ಕೊಟ್ಟ ಬಜೆಟ್ (ಕಿ. ಮೀ.ಗೆ) -18 ಕೋಟಿ
ಲೆಕ್ಕ ಕೊಟ್ಟದ್ದು (ಕಿ. ಮೀ.ಗೆ)- 256 ಕೋಟಿ
ಅದಾನಿ ಹೆಸರಲ್ಲಿ ಇನ್ನೆಷ್ಟೊ..
ಇಲ್ಲಿ ನುಂಗಿದ ಹಣದ 10 % ಈ ಸ್ಲಮ್ಮುಗಳಿಗೆ ಖರ್ಚು ಮಾಡಿದ್ದರೆ ಪರದೆಯಲ್ಲಿ ಮುಚ್ಚುವ ಖರ್ಚು ಉಳಿಯುತ್ತಿರಲಿಲ್ಲವೇ ?? ಸ್ಲಂ ವಾಸಿಗಳು ಮನುಷ್ಯರಲ್ಲವೇ? ಭಾರತೀಯರಲ್ಲವೇ?
ಪ್ರಜೆಗಳ ಕೋಟಿ ಕೋಟಿ ಹಣ ಜೇಬಿಗೆ ಸೇರಿಸಿ ಪ್ರಶ್ನೆಗಳನ್ನೆದುರಿಸದೇ ಟಾಟಾ ಮಾಡಿ ಹೋದವರು,
ಕೊರಳ ಪಟ್ಟಿ ಹಿಡಿದು ಪ್ರಶ್ನೆ ಕೇಳದೆ ಉಧೋ ಉಧೋ ಎನ್ನುತ್ತಾ ನಿಂತ ಮಾನಗೆಟ್ಟ ಮುಖ್ಯವಾಹಿನಿ ಮಾಧ್ಯಮಗಳು.
ಇವರೆಲ್ಲರನ್ನೂ ಪ್ರಶ್ನಿಸದೆ ಬಾಯಿಮುಚ್ಚಿ ಕೂತರೆ ಇಡೀ ದೇಶಕ್ಕೇ ಪರದೆ ಹಾಕಬೇಕಾದೀತು ಎಚ್ಚರ

Join Whatsapp
Exit mobile version