Home ಟಾಪ್ ಸುದ್ದಿಗಳು ಟಿಪ್ಪು ಪ್ರತಿಮೆ ಸ್ಥಾಪಿಸಿದರೆ ಬಾಬರಿ ಮಸೀದಿಯಂತೆ ಧ್ವಂಸಗೊಳಿಸುತ್ತೇವೆ: ಮುತಾಲಿಕ್ ಹೊಸ ವರಸೆ

ಟಿಪ್ಪು ಪ್ರತಿಮೆ ಸ್ಥಾಪಿಸಿದರೆ ಬಾಬರಿ ಮಸೀದಿಯಂತೆ ಧ್ವಂಸಗೊಳಿಸುತ್ತೇವೆ: ಮುತಾಲಿಕ್ ಹೊಸ ವರಸೆ

ಹುಬ್ಬಳ್ಳಿ: ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ಸ್ಥಾಪಿಸಿದರೆ ಅದನ್ನು ಬಾಬರಿ ಮಸೀದಿಯಂತೆ ಧ್ವಂಸ ಮಾಡಲಾಗುವುದು ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹಾಗೂ ಉದ್ರೇಕಕಾರಿ ಹೇಳಿಕೆಗಳನ್ನು ಮುಂದುವರೆಸಿದ್ದಾರೆ.


ನಗರದ ಈದ್ಗಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಪ್ರತಿಮೆ ಪ್ರತಿಷ್ಠಾಪಿಸುವಂಥ ಕೆಟ್ಟ ಕೆಲಸಕ್ಕೆ ಯಾರೂ ಕೈ ಹಾಕಬಾರದು. ಬೇಕಾದರೆ, ಸಂತ ಶಿಶುನಾಳ ಷರೀಫ್, ಅಬ್ದುಲ್ ಕಲಾಂ ಅವರಂತಹ ಮೂರ್ತಿ ಪ್ರತಿಷ್ಠಾಪಿಸಿ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಿಸಬೇಕು ಎನ್ನುವುದು ವಿಫಲವಾಗಿದೆ. ಆದರೆ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಆಚರಿಸಲು ಅನುಮತಿ ನೀಡಬೇಕೆಂದು ಮನವಿ ನೀಡಿದ ಸಂಘಟನೆಯಲ್ಲಿಯೇ ಒಡಕು ಉಂಟಾಗಿತ್ತು. ಅವರಲ್ಲಿದ್ದ ಬಹುತೇಕರು ಬಂದಿಲ್ಲ, ಮುಸ್ಲಿಮರು ಸಹ ಬಂದಿಲ್ಲ. ಇದರಿಂದ ಟಿಪ್ಪು ಜಯಂತಿ ಆಚರಣೆ ವಿಫಲವಾಗಿದೆ ಎಂದರು.


ಪಾಲಿಕೆ ವಿರೋಧ ಪಕ್ಷದ ನಾಯಕರು ಪಾಲಿಕೆ ಕಟ್ಟಡದಲ್ಲಿ ಟಿಪ್ಪು ಜಯಂತಿ ಆಚರಿಸಿದ್ದು ಸರಿಯಲ್ಲ. ಸರ್ಕಾರಿ ಕಚೇರಿಯಲ್ಲಿ ಜಯಂತಿ ಆಚರಿಸಿರುವ ಕುರಿತು ಮೇಯರ್ ಅವರ ಮೇಲೆ ಕ್ರಮ ಕೈಗೊಂಡು, ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ನಾವೇ ಪೊಲೀಸ್ ದೂರು ನೀಡುತ್ತೇವೆ ಎಂದು ಹೇಳಿದರು.

Join Whatsapp
Exit mobile version