Home ಟಾಪ್ ಸುದ್ದಿಗಳು ಅಕ್ರಮ ಆಸ್ತಿ ಇದ್ದರೆ ಸರ್ಕಾರ ವಶಕ್ಕೆ ಪಡೆಯಲಿ: ರೇವಣ್ಣ

ಅಕ್ರಮ ಆಸ್ತಿ ಇದ್ದರೆ ಸರ್ಕಾರ ವಶಕ್ಕೆ ಪಡೆಯಲಿ: ರೇವಣ್ಣ

ಹಾಸನ: ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಆರೋಪಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗುಡುಗಿದ್ದು, ನಾನು ಈ ಜಿಲ್ಲೆಯಲ್ಲಿ ಬೇನಾಮಿ ಆಸ್ತಿಮಾಡಿದ್ದರೆ ಸರ್ಕಾರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿ. ಯಾವುದೇ ರೀತಿಯ ತನಿಖೆಗೂ ನಾನು ಸಿದ್ದ ಎಂದು ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿ ರಾಮಸ್ವಾಮಿ ಅವರು ಯಾವುದೇ ದಾಖಲೆ ಇಲ್ಲದೆ, ಪೂರ್ವಗ್ರಹ ಪೀಡಿತರಾಗಿ ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಮಸ್ವಾಮಿ ಅನ್ಯಾಯಕ್ಕೆ ಒಳಗಾದ ಮಹಿಳೆ ಹೆಸರಿನಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯುವ ಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲಾ ರೀತಿಯ ತನಿಖೆ ಎದುಸಿರೋದು ದೇವೇಗೌಡರ ಕುಟುಂಬ. ನನ್ನ ವಿರುದ್ದ ಯಾವುದಾದರೂ ಬೇನಾಮಿ ಪಟ್ಟಿ ಇದ್ದರೆ ಯಾವುದಾದರೂ ಸಂಸ್ಥೆಗೆ ದೂರು ಕೊಡಲಿ ಎಂದು ಹೇಳಿದರು.

ನಾನು ಈ ಜಿಲ್ಲೆಯಲ್ಲಿ ಯಾವ ದೌರ್ಜನ್ಯ ಮಾಡಿಸಿದ್ದೀನಿ, ಯಾವ ಆಸ್ತಿ ಪಡೆದಿದ್ದೇನೆ ಎಂದು ಹೇಳಲಿ. ಪ್ರತಿಭಟನೆಗೆ ಹೇಗೆ ಜನರನ್ನು ಕರೆದುಕೊಂಡು ಬಂದರು, ಹೇಗೆ ಪೇಮೆಂಟ್ ಆಯ್ತು ಗೊತ್ತಿದೆ. ಇದೇ ರೀತಿ ಮಾಡಿದರೆ ಕಾನೂನು ಹೋರಾಟ ಏನು ಮಾಡಬೇಕೊ ಮಾಡ್ತೀನಿ ಎಂದು ರೇವಣ್ಣ ಎಚ್ಚರಿಕೆ ನೀಡಿದರು.

Join Whatsapp
Exit mobile version