5 ಕೆಜಿ ಅಕ್ಕಿಗೆ ಕೊರತೆ ಇದ್ರೆ ಬೇಳೆ, ಎಣ್ಣೆ, ಬೆಲ್ಲ ವಿತರಿಸಿ: ಕುಮಾರಸ್ವಾಮಿ

Prasthutha|

ಬೆಂಗಳೂರು: 5 ಕೆಜಿ ಅಕ್ಕಿಗೆ ಕೊರತೆ ಇದ್ರೆ ಸಮಸ್ಯೆ ಬಗೆಹರಿಯುವವರೆಗೆ ಬೇಳೆ, ಎಣ್ಣೆ, ಬೆಲ್ಲ ವಿತರಿಸಬಹುದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

- Advertisement -


ಇಂದು ನಡೆದ ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿದ ಅವರು, ಅನ್ನಭಾಗ್ಯದಲ್ಲಿ ಐದು ಕೆಜಿ ಅಕ್ಕಿಗೆ ಕೊರತೆ ಇದೆ. ಪೌಷ್ಠಿಕ ಆಹಾರದ ಕೊರತೆ ಇರುವವರಿಗೆ ಬೇಳೆ, ಎಣ್ಣೆ, ಬೆಲ್ಲ, ಮುಂತಾದ ಪದಾರ್ಥ ಕೊಡಬಹುದು. ಗೃಹಲಕ್ಷ್ಮಿ ಯೋಜನೆಯಲ್ಲಿ ಕುಟುಂಬದ ಸಹಬಾಳ್ವೆ ಹಾಳಾಗದಂತೆ ಕ್ರಮ ವಹಿಸಿ. ಯುವಭತ್ಯೆ ಯೋಜನೆಯಡಿ ಡಿಪ್ಲೊಮಾ ಪದವೀಧರರಿಗೆ ಒಂದೂವರೆ ಸಾವಿರ ಮಾತ್ರ ಯಾಕೆ? ನಿರುದ್ಯೋಗಿ ಪದವೀಧರರಿಗೆ 3000 ಆದ್ರೆ ಡಿಪ್ಲೋಮಾದವರಿಗೆ 1.5 ಸಾವಿರ ಮಾತ್ರ ಯಾಕೆ? ಈ ವರ್ಷದ ನಿರುದ್ಯೋಗಿಗಳು ಮಾತ್ರ ನಿರುದ್ಯೋಗಿಗಳಾ? ಹಿಂದಿನ ವರ್ಷಗಳಲ್ಲಿರುವವರು ನಿರುದ್ಯೋಗಿಗಳಲ್ವಾ? ನೀವು ನುಡಿದಂತೆ ನಡೆದಿಲ್ಲ ಅಂತ ಹೇಳಲ್ಲ, ಆದ್ರೆ ನುಡಿದಂತೆ ಸಂಪೂರ್ಣ ನಡೆದಿಲ್ಲ. ಕೊಟ್ಟ ಮಾತು ಸಂಪೂರ್ಣವಾಗಿ ಉಳಿಸಿಕೊಳ್ಳುವತ್ತ ಗಮನ ಕೊಡಿ ಎಂದು ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ಗೆ ಸಲಹೆ ನೀಡಿದರು.