Home ಟಾಪ್ ಸುದ್ದಿಗಳು ಬಿಜೆಪಿಯಲ್ಲಿ ಗಂಡಸರಿದ್ದರೆ ರಾಜ್ಯದ ತೆರಿಗೆ ಪಾಲಿಗೆ ದನಿ ಎತ್ತಲಿ: ಬಾಲಕೃಷ್ಣ

ಬಿಜೆಪಿಯಲ್ಲಿ ಗಂಡಸರಿದ್ದರೆ ರಾಜ್ಯದ ತೆರಿಗೆ ಪಾಲಿಗೆ ದನಿ ಎತ್ತಲಿ: ಬಾಲಕೃಷ್ಣ

ರಾಮನಗರ: ನಮ್ಮ ಪಾಲಿನ ಅನುದಾನಕ್ಕಾಗಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟ ನೋಡಿಯಾದರೂ, ಬಿಜೆಪಿಯಲ್ಲಿ ಗಂಡಸರಿದ್ದರೆ ಕೇಂದ್ರ ಸರಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಲಿ. ದೆಹಲಿಗೆ ಹೋಗಿ ಟಿ.ಎ ಮತ್ತು ಡಿ.ಎ ತಗೊಂಡು ಬರುತ್ತಿರುವ ಬಿಜೆಪಿ ಸಚಿವರು ಹಾಗೂ ಸಂಸದರು ಷೋ ಪೀಸ್‌ಗಳು ಎಂದು ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಗುಡುಗಿದ್ದಾರೆ.

ತಮ್ಮ ಹಕ್ಕಿಗಾಗಿ ತಮಿಳುನಾಡು ಸಂಸದರು ಹೇಗೆ ದನಿ ಎತ್ತುತ್ತಾರೆ ಎಂಬುದನ್ನು ನೋಡಿ ಕರ್ನಾಟಕದ ಬಿಜೆಪಿ ಸಂಸದರಯ ಕಲಿಯಲಿ ಎಂದು ಬಾಲಕೃಷ್ಣ ಇದೇ ಸಂದರ್ಭ ಸಲಹೆ ನೀಡಿದರು.

ತಾಲ್ಲೂಕಿನ ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಕೇಂದ್ರಕ್ಕೆ ಹೆಚ್ಚು ತೆರಿಗೆ ಪಾವತಿಸುವ ದೇಶದ ಎರಡನೇ ರಾಜ್ಯ. ಆದರೂ ನಮಗೆ ಕೊಡಬೇಕಾದ ಅನಯದಾನ ಕೊಡುತ್ತಿಲ್ಲ. ರಾಜ್ಯದ ಬಿಜೆಪಿ ಸಚಿವರು ಮತ್ತು ಸಂಸದರಿಗೆ ಪ್ರಧಾನಿ ಮೋದಿ ಅವರ ಮುಂದೆ ನಿಲ್ಲುವುದಕ್ಕೂ ಆಗುವುದಿಲ್ಲ. ವೈಯಕ್ತಿಕ ವರ್ಚಸ್ಸಿಲ್ಲದ ಅವರು, ಕೇವಲ ಮೋದಿ ಹೆಸರಲ್ಲಿ ಗೆಲ್ಲುತ್ತಾರೆ’ ಎಂದು ಬಾಲಕೃಷ್ಣ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ದನಿ ಕಳೆದುಕೊಂಡಿರುವ ಕಾರಣ ನಾವು ಅನುದಾನಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಬಿಜೆಪಿಯಲ್ಲಿ ಗಂಡಸರಿಲ್ಲ ಎಂದೇ ಇದರ ಅರ್ಥ. ಅನುದಾನದ ವಿಷಯದಲ್ಲಿ ಅನ್ಯಾಯ ಸರಿಪಡಿಸದಿದ್ದರೆ ಪ್ರತ್ಯೇಕ ದೇಶದ ದನಿ ಎಳುತ್ತದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿರುವುದನ್ನು, ಬಿಜೆಪಿಯವರು ತಿರುಚಿದ್ದಾರೆ ಎಂದ ಮಾಗಡಿ ಶಾಸಕ, ಇಷ್ಟಕ್ಕೂ ಡಿಕೆ ಸುರೇಶ್ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.


Join Whatsapp
Exit mobile version