Home ಟಾಪ್ ಸುದ್ದಿಗಳು ಡಿಸಿಎಂ ಹುದ್ದೆ ಕೊಟ್ಟರೆ ಬೇಡ ಅನ್ನಲ್ಲ: ಸಚಿವ ಸತೀಶ ಜಾರಕಿಹೊಳಿ

ಡಿಸಿಎಂ ಹುದ್ದೆ ಕೊಟ್ಟರೆ ಬೇಡ ಅನ್ನಲ್ಲ: ಸಚಿವ ಸತೀಶ ಜಾರಕಿಹೊಳಿ

►ಮೂರು ಡಿಸಿಎಂ ಹುದ್ದೆ ಪಕ್ಷ ನಿರ್ಧಾರ ಮಾಡುತ್ತದೆ

ಬಾಗಲಕೋಟೆ: ಡಿಸಿಎಂ ಹುದ್ದೆ ಕೊಟ್ಟರೆ ಬೇಡ ಅನ್ನಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ. ಹೈಕಮಾಂಡ್‌ ಸೂಚನೆ ಕೊಟ್ಟರೆ ಮೂರು ಡಿಸಿಎಂ ಹುದ್ದೆ ಮಾಡುತ್ತೇವೆ. ನೆಗೆಟಿವ್ ಇರುವುದನ್ನು ಪಾಸಿಟಿವ್ ಮಾಡಲು ರಾಜಕಾರಣಿಗಳು ಕಲಿಯಬೇಕು ಎಂದು ಹೇಳಿದ್ದಾರೆ.

ಸರ್ಕಾರ ಟೇಕ್ ಆಫ್ ಆಗ್ಲಿಕ್ಕೆ ಮೂರರಿಂದ ಆರು ತಿಂಗಳು ಬೇಕು. ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸೀಟು ಗೆದ್ದರೆ ನಮ್ಮ ಶ್ರಮಕ್ಕೆ ಫಲ ಸಿಕ್ಕಂತೆ ಎಂದರು.

ಲೋಕೋಪಯೋಗಿ ಇಲಾಖೆಯಿಂದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ ಹಣ ಮತ್ತು ನೀರು ಸಂಗ್ರಹಿಸುವ ಕೆಲಸ ಮಾಡಲಾಗುತ್ತದೆ. ಕಳಪೆ ಕಾಮಗಾರಿ ತಡೆಹಿಡಿಯುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ದೊಡ್ಡ ದೊಡ್ಡ ಯೋಜನೆಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಪಕ್ಷಕ್ಕೆ ಸೇರುವವರನ್ನು ಮುಕ್ತವಾಗಿ ಸೇರಿಸಿಕೊಳ್ಳುತ್ತೇವೆ ಎಂದರು.

Join Whatsapp
Exit mobile version