Home ಟಾಪ್ ಸುದ್ದಿಗಳು ಸಂವಿಧಾನ ಬದಲಾಯಿಸಲು ಬಂದರೆ ವಿರೋಧಿಸಿ: ಶೂದ್ರರರಲ್ಲಿ ಜಾಗೃತಿ ಮೂಡಿಸಿದ ಸಿದ್ಧರಾಮಯ್ಯ

ಸಂವಿಧಾನ ಬದಲಾಯಿಸಲು ಬಂದರೆ ವಿರೋಧಿಸಿ: ಶೂದ್ರರರಲ್ಲಿ ಜಾಗೃತಿ ಮೂಡಿಸಿದ ಸಿದ್ಧರಾಮಯ್ಯ

ಹರಿಹರ (ದಾವಣಗೆರೆ ಜಿಲ್ಲೆ): ಯಾವುದೇ ಪಕ್ಷದವರು ಸಂವಿಧಾನವನ್ನು ಬದಲಾಯಿಸಲು, ಹಾಳು ಮಾಡಲು ಬಂದರೂ ಎಲ್ಲ ಶೂದ್ರರು ಅವರ ವಿರುದ್ಧ ಎದ್ದು ನಿಲ್ಲಬೇಕು. ಅದನ್ನು ಪ್ರತಿಭಟಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿರುವ ಮಹರ್ಷಿ ವಾಲ್ಮೀಕಿ ಪೀಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಯಲ್ಲಿ ಜನಜಾಗೃತಿ ಜಾತ್ರಾ ಮಹೋತ್ಸವದಲ್ಲಿ ಅವರು ‘ವಾಲ್ಮೀಕಿ ವಿಜಯ’ ಸ್ಮರಣ ಸಂಪುಟ ಉದ್ಘಾಟಿಸಿ, “ಸಂವಿಧಾನ ಇರುವುದರಿಂದಲೇ ನಾನು ವಿದ್ಯೆ ಕಲಿಯಲು ಸಾಧ್ಯವಾಯಿತು. ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ನೀವೂ ವಿದ್ಯೆ ಕಲಿಯಲು ಸಾಧ್ಯವಾಯಿತು. ಅಂಥ ಸಂವಿಧಾನವನ್ನು ನಾವೆಲ್ಲರೂ ರಕ್ಷಣೆ ಮಾಡಲೇಬೇಕು ಎಂದು ಹೇಳಿದರು. “ಡಾ.ಬಿ.ಆರ್. ಅಂಬೇಡ್ಕರ್ ಅವರು ತಿಳಿಸಿರುವ ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳೇ ಎಲ್ಲರೂ ಧೈಯವಾಗಿಸಿಕೊಂಡು ಮುಂದೆ ಸಾಗಬೇಕು” ಎಂದರು.

Join Whatsapp
Exit mobile version