Home ಟಾಪ್ ಸುದ್ದಿಗಳು ಕೇಂದ್ರ ಸರ್ಕಾರ ಅನುಮತಿಸಿದರೆ ನನ್ನ ವಿಮಾನದಲ್ಲೇ ಮೃತ ನವೀನನ ಪಾರ್ಥೀವ ಶರೀರ ತಾಯ್ನಾಡಿಗೆ: ಕಾಂಗ್ರೆಸ್ ಮುಖಂಡ...

ಕೇಂದ್ರ ಸರ್ಕಾರ ಅನುಮತಿಸಿದರೆ ನನ್ನ ವಿಮಾನದಲ್ಲೇ ಮೃತ ನವೀನನ ಪಾರ್ಥೀವ ಶರೀರ ತಾಯ್ನಾಡಿಗೆ: ಕಾಂಗ್ರೆಸ್ ಮುಖಂಡ ಪ್ರಕಾಶ್ ಕೋಳಿವಾಡ್

ರಾಣೆಬೆನ್ನೂರು: ರಷ್ಯಾ ಶೆಲ್ ದಾಳಿಗೊಳಗಾಗಿ ಮಂಗಳವಾರ ಉಕ್ರೇನ್ ನಲ್ಲಿ ಮೃತ ವಿದ್ಯಾರ್ಥಿ ನವೀನ್ ಎಂಬಾತನ ಪಾರ್ಥೀವ ಶರೀರವನ್ನು ತಮ್ಮ ಕಂಪೆನಿಯ ಚಾರ್ಟೆಡ್ ವಿಮಾನದಲ್ಲಿ ತಾಯ್ನಾಡಿಗೆ ತರಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ಅನುಮತಿಸಬೇಕಾಗಿದೆ ಎಂದು ಖ್ಯಾತ ಉದ್ಯಮಿ ಪ್ರಕಾಶ್ ಕೋಳಿವಾಡ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ಕೋಳಿವಾಡ್, ಮೃತ ನವೀನನ ಪಾರ್ಥೀನ ಶರೀರವನ್ನು ತಾಯ್ನಾಡಿಗೆ ತರಲು ನಮ್ಮ ಕಂಪೆನಿಯ ಚಾರ್ಟೆಡ್ ವಿಮಾನ ಮತ್ತು ಏರ್ ಆಂಬುಲೆನ್ಸ್ ಸಿದ್ಧವಿದ್ದು, ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಂಸದರು, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಾತ್ರವಲ್ಲ ನವೀನನ ಪಾರ್ಥೀವ ಶರೀರದೊಂದಿಗೆ ಉಕ್ರೇನ್ ನಲ್ಲಿ ಸಿಲುಕಿರುವ ಇತರೆ 7 ರಾಣೆಬೆನ್ನೂರಿನ ವಿದ್ಯಾರ್ಥಿಗಳನ್ನು ಕರೆದು ತರಲು ವ್ಯವಸ್ಥೆಗೊಳಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿದರೆ, ದೇಶಾದ್ಯಂತ ಸುಮಾರು 500 ಖಾಸಗಿ ವಿಮಾನಗಳ ಮಾಲಕರ ಅಸೋಸಿಯೇಷನ್ ಜೊತೆ ಮಾತುಕತೆ ನಡೆಸಿ, ಸಂತ್ರಸ್ತ 7000 ವಿದ್ಯಾರ್ಥಿಗಳನ್ನು ಕರೆತರುವ ಯೋಜನೆ ರೂಪಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿರುವ ಕರ್ನಾಟಕ ಮೂಲದ ನವೀನ್ ಎಂಬಾತನು ರಷ್ಯಾದ ಶೆಲ್ ದಾಳಿಗೆ ನಿನ್ನೆ ಮೃತಪಟ್ಟಿದ್ದರು.

Join Whatsapp
Exit mobile version