ಬಿಜೆಪಿ, ಜೆಡಿಎಸ್ ಕೈ ಜೋಡಿಸಿದರೆ ಆಗೋದು ಕೇವಲ 85 ಸ್ಥಾನ ಅಷ್ಟೇ; ಡಿಕೆಶಿಗೆ ಸಿಎಂ ಇಬ್ರಾಹಿಂ ಟಾಂಗ್

Prasthutha|

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಬಿಜೆಪಿ, ಜೆಡಿಎಸ್ ಮೈತ್ರಿ ಕುರಿತ ಊಹಾಪೋಹಗಳು ಇತ್ತೀಚಿಗೆ ಹರಿದಾಡುತ್ತಿವೆ. ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಬಿಜೆಪಿ, ಜೆಡಿಎಸ್ ಕೈ ಜೋಡಿಸಿದರೆ ಆಗೋದು ಕೇವಲ 85 ಸ್ಥಾನಗಳಷ್ಟೇ ಎಂದು ಹೇಳುವ ಮೂಲಕ ; ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಇಬ್ರಾಹಿಂ ಟಾಂಗ್ ನೀಡಿದ್ದಾರೆ.

- Advertisement -


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ಕೈ ಜೋಡಿಸಿದರೆ ಆಗೋದು ಕೇವಲ 85 ಸ್ಥಾನಗಳಷ್ಟೇ, ಇನ್ನೂ 50ಕ್ಕೂ ಹೆಚ್ಚು ಸ್ಥಾನಗಳ ಅಗತ್ಯವಿದೆ. ಅದರ ಬಗ್ಗೆ ಏಕೆ ಕಾಳಜಿ ವಹಿಸುತ್ತೀರಿ? ಮೊದಲು, ನೀವು ನಿಮ್ಮ ಭರವಸೆಗಳನ್ನು ಈಡೇರಿಸಿ ಎಂದಿದ್ದಾರೆ. ಜೆಡಿಎಸ್ ಗೆ ಆಪರೇಷನ್ ನಂತಹ ಯಾವುದೇ ಯೋಜನೆ ಇಲ್ಲ. ಶಿವಕುಮಾರ್ ಅವರಿಗೆ ಏನಾದರೂ ಸಂದೇಹಗಳಿದ್ದರೆ ನೇರವಾಗಿ ಬಂದು ನನ್ನ ಬಳಿ ಮಾತನಾಡಬಹುದು ಎಂದು ಹೇಳಿದ್ದಾರೆ.

Join Whatsapp