ಸ್ಯಾಂಟ್ರೋ ರವಿಯನ್ನು ಬಂಧಿಸಿದರೆ ಹಲವು ಸಚಿವರ ಬಣ್ಣ ಬಯಲಾಗುತ್ತದೆ: ಜನತಾ ಪಾರ್ಟಿ

Prasthutha|

ಬೆಂಗಳೂರು: ರಾಜ್ಯ ಸರ್ಕಾರದ ಮರ್ಯಾದೆಯನ್ನು ಹರಾಜು ಹಾಕಿರುವ ಕ್ರಿಮಿನಲ್ ಹಿನ್ನೆಲೆಯ ಸ್ಯಾಂಟ್ರೋ ರವಿಯನ್ನು ಕೂಡಲೇ ಬಂಧಿಸಬೇಕೆಂದು ಜನತಾ ಪಾರ್ಟಿ ಆಗ್ರಹಿಸಿದೆ.

- Advertisement -


ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷೆ ಬಿ.ಟಿ.ಲಲಿತಾ ನಾಯಕ್ , ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ನಡೆಸಿರುವ ಸ್ಯಾಂಟ್ರೋ ರವಿಗೆ ರಾಜ್ಯ ಸರ್ಕಾರವೇ ಅವರಿಗೆ ರಕ್ಷಣೆ ನೀಡುತ್ತಿದೆ. ಅನೇಕ ಸಚಿವರು ಈತನ ಜತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನ ಬಿಎಂಆರ್ ಸಿಎಲ್ ಮೆಟ್ರೋ ಕಾಮಗಾರಿಯಲ್ಲಿ ಫಿಲ್ಲರ್ ನಿರ್ಮಾಣ ಅತ್ಯಂತ ಕಳಪೆಯಾಗಿದೆ. ಇದರಿಂದ ತಾಯಿ ಮತ್ತು ಮಗು ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ಕಾರಣವಾಗಿದ್ದು. ಶೇ 40ರಷ್ಟು ಕಮಿಶನ್ ದಂಧೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು.


ಮುಂದಿನ ಅವಧಿಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಚುನಾವಣೆ ಇದೇ 16ಮತ್ತು 17ರಂದು ನಡೆಯಲಿದೆ ಎಂದು ತಿಳಿಸಿದರು
ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ಮಾತನಾಡಿ, ಸ್ಯಾಂಟ್ರೋ ರವಿ ವಿಚಾರದಲ್ಲಿ ಒಎಸ್ ನಂ 2535/21 ಪ್ರಕರಣವನ್ನು ಮತ್ತೆ ತೆರೆದರೆ 6 ಮಂದಿ ಸಚಿವರ ಗುಪ್ತ ಪ್ರಕರಣಗಳು ಬೆಳಕಿಗೆ ಬರಲಿವೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.



Join Whatsapp