Home ಟಾಪ್ ಸುದ್ದಿಗಳು ಜನಪ್ರತಿನಿಧಿಗಳು ಪಿಂಚನಿಗೆ ಅರ್ಹರಾದರೆ ‘ಅಗ್ನಿವೀರರು’ ಯಾಕಲ್ಲ: ಕೇಂದ್ರಕ್ಕೆ ವರುಣ್ ಗಾಂಧಿ ಪ್ರಶ್ನೆ

ಜನಪ್ರತಿನಿಧಿಗಳು ಪಿಂಚನಿಗೆ ಅರ್ಹರಾದರೆ ‘ಅಗ್ನಿವೀರರು’ ಯಾಕಲ್ಲ: ಕೇಂದ್ರಕ್ಕೆ ವರುಣ್ ಗಾಂಧಿ ಪ್ರಶ್ನೆ

ಉತ್ತರ ಪ್ರದೇಶ: ಬಿಜೆಪಿ ನುಂಗಲಾರದ ತುತ್ತಾಗಿರುವ ಸಂಸದ ವರುಣ್ ಗಾಂಧಿ ಮತ್ತೆ ಕೇಂದ್ರ ಸರಕಾರವನ್ನು ಕುಟುಕಿದ್ದಾರೆ. ಕೇಂದ್ರದ ಅಗ್ನಿಪತ್ ಯೋಜನೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಸಂಸದ, ಜನಪ್ರತಿನಿಧಿಗಳು ಪಿಂಚನಿಗೆ ಅರ್ಹರಾದರೆ ‘ಅಗ್ನಿವೀರರು’ ಯಾಕಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ವರುಣ್ ಗಾಂಧಿ, ಅಲ್ಪಾವಧಿಯ ಸೇವೆಯಲ್ಲಿರುವ ಅಗ್ನಿವೀರ್ ಪಿಂಚಣಿಗೆ ಅರ್ಹನಲ್ಲ, ಹಾಗಾದರೆ ಜನ ಪ್ರತಿನಿಧಿಗಳಿಗೆ ಈ ‘ಸೌಲಭ್ಯ’ ಏಕೆ? ರಾಷ್ಟ್ರೀಯ ಕಾವಲುಗಾರರಿಗೆ ಪಿಂಚಣಿಯ ಹಕ್ಕು ಇಲ್ಲ, ಆದ್ದರಿಂದ ನಾನು ನನ್ನ ಸ್ವಂತ ಪಿಂಚಣಿಯನ್ನು ತ್ಯಜಿಸಲು ಸಿದ್ಧನಿದ್ದೇನೆ ಎಂದಿದ್ದಾರೆ. ನಾವು ಶಾಸಕರು/ ಸಂಸದರು ನಮ್ಮ ಪಿಂಚಣಿಯನ್ನು ತ್ಯಜಿಸಿ ಅಗ್ನಿವೀರ್ ಗಳಿಗೆ ಪಿಂಚಣಿ ಸಿಗುವಂತೆ ನೋಡಿಕೊಳ್ಳಲು ಸಾಧ್ಯವಿಲ್ಲವೇ ಎಂದು ಹೇಳಿದ್ದಾರೆ.

ಅಗ್ನಿಪಥ್ ಯೋಜನೆಗೆ ಈ ಹಿಂದೆಯೇ ವಿರೋಧ ವ್ಯಕ್ತಪಡಿಸಿದ್ದ ಸಂಸದ ವರುಣ್, ಈ ಕುರಿತು ಕೇಂದ್ರವು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್’ಗೆ ವರುಣ್ ಗಾಂಧಿ ಪತ್ರ ಬರೆದಿದ್ದರು. ನಾಲ್ಕು ವರ್ಷಗಳ ನಂತರ ಶೇಕಡಾ 75 ರಷ್ಟು ಸೈನಿಕರು “ನಿರುದ್ಯೋಗಿಗಳಾಗುತ್ತಾರೆ, ಅವರ ಒಟ್ಟು ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಲೇ ಇರುವುದರಿಂದ, ಇದು ಯುವಕರಲ್ಲಿ ಹೆ

Join Whatsapp
Exit mobile version