Home ಟಾಪ್ ಸುದ್ದಿಗಳು ಜನರು ತಮ್ಮ ನಿಜವಾದ ಜನಸಂಖ್ಯೆ ಬಗ್ಗೆ ತಿಳಿದುಕೊಂಡರೆ ದೇಶದ ಚಿತ್ರಣ ಬದಲು: ರಾಹುಲ್ ಗಾಂಧಿ

ಜನರು ತಮ್ಮ ನಿಜವಾದ ಜನಸಂಖ್ಯೆ ಬಗ್ಗೆ ತಿಳಿದುಕೊಂಡರೆ ದೇಶದ ಚಿತ್ರಣ ಬದಲು: ರಾಹುಲ್ ಗಾಂಧಿ

ಬೆಮೆತಾರಾ: ಇತರೆ ಹಿಂದುಳಿದ ವರ್ಗಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ತಮ್ಮ ವಾಸ್ತವಿಕ ಜನಸಂಖ್ಯೆಯ ಲೆಕ್ಕ ಸಿಕ್ಕಾಗ ಈ ದೇಶದ ಚಿತ್ರಣವೇ ಬದಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದರು.


ನವೆಂಬರ್ 17ರಂದು ನಡೆಯಲಿರುವ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಛತ್ತೀಸ್ಗಢದ ಬೆಮೆತಾರಾ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 12,000 ಕೋಟಿ ರೂಪಾಯಿ ಮೌಲ್ಯದ ವಿಮಾನದಲ್ಲಿ ಹಾರಾಟ ನಡೆಸುತ್ತಾರೆ. ಪ್ರತಿದಿನ ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಅವರು OBC ಪದವನ್ನು ಬಳಸಿ ಚುನಾಯಿತರಾದರು. ಆದರೆ, OBCಗಳಿಗೆ ಹಕ್ಕುಗಳನ್ನು ನೀಡುವ ಸಮಯ ಬಂದಾಗ ಕುಂಟು ನೆಪ ಹೇಳುತ್ತಿದ್ದಾರೆ. ಅವರು ಈ ಬಗ್ಗೆ ಸ್ಪಷ್ಟ ನಿಲುವು ತಳೆದಿಲ್ಲ. ನಾವು ಒಬಿಸಿ ಕುರಿತಾಗಿ ಮಾತನಾಡಿದರೆ ಕೇಂದ್ರ ಸರ್ಕಾರ ಒಬಿಸಿ ಸಮುದಾಯವೇ ಇಲ್ಲ ಎನ್ನುತ್ತದೆ. ಭಾರತದಲ್ಲಿ ಇರುವುದು ಒಂದೇ ಜಾತಿ, ಅದು ಬಡವರು ಎಂದು ಹೇಳುತ್ತಿದೆ. ಆದರೆ, ದೇಶದಲ್ಲಿ ಒಬಿಸಿ ಸಮುದಾಯ ಎಷ್ಟಿದೆ? ಇದನ್ನು ನಾವು ಪತ್ತೆ ಮಾಡಬೇಕಿದೆ ಎಂದು ರಾಹುಲ್ ಗಾಂಧಿ ಹೇಳಿದರು.

Join Whatsapp
Exit mobile version