Home ಟಾಪ್ ಸುದ್ದಿಗಳು ‘ಸಾವರ್ಕರ್ ಅಲ್ಲದಿದ್ದರೆ, ಯಾರ ಪೋಸ್ಟರ್ ಹಾಕಬೇಕು, ದಾವೂದ್ ಇಬ್ರಾಹಿಂನದ್ದ?’: ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ

‘ಸಾವರ್ಕರ್ ಅಲ್ಲದಿದ್ದರೆ, ಯಾರ ಪೋಸ್ಟರ್ ಹಾಕಬೇಕು, ದಾವೂದ್ ಇಬ್ರಾಹಿಂನದ್ದ?’: ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ

ಬೆಳಗಾವಿ: ಬೆಳಗಾವಿಯಲ್ಲಿ ನಡೆದ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಸಾವರ್ಕರ್ ಭಾವಚಿತ್ರವನ್ನು ಅನಾವರಣಗೊಳಿಸಿದ್ದಕ್ಕೆ ಪ್ರತಿಭಟಿಸಿದ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದು, ಸಾವರ್ಕರ್ ಬದಲು ಯಾರ ಪೋಸ್ಟರ್ ಹಾಕಬೇಕಿತ್ತು? ದಾವೂದ್ ಇಬ್ರಾಹಿಂ ಅವರದ್ದ?” ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರಬೇಕು ಆದರೆ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ. ಸಿದ್ದರಾಮಯ್ಯ ಅವರನ್ನು ಕೇಳಿ ಯಾರ ಪೋಸ್ಟರ್ ಹಾಕಬೇಕಿತ್ತು? ದಾವೂದ್ ಇಬ್ರಾಹಿಂ ಅವರದ್ದ? ಎಂದು ವ್ಯಂಗ್ಯವಾಡಿದ್ದಾರೆ.

“ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪಾತ್ರ ಮತ್ತು ತ್ಯಾಗದ ಬಗ್ಗೆ ಅವರು ಮಾತನಾಡುತ್ತಲೇ ಇರುತ್ತಾರೆ. ಆದರೆ ಆಗಿನ ಕಾಂಗ್ರೆಸ್ ಮತ್ತು ಈಗಿನ ಕಾಂಗ್ರೆಸ್ ಒಂದೇ ಅಲ್ಲ, ಈಗ ನಮ್ಮ ಬಳಿ ಇರುವುದು ನಕಲಿ ಕಾಂಗ್ರೆಸ್ ಎಂದು ಹೇಳಿದರು.

Join Whatsapp
Exit mobile version