ಭೀವಂಡಿ: ಭಾರತ ಯಾರಿಗಾದರೂ ಸೇರುವುದರಿದ್ದರೆ ಅದು ದ್ರಾವಿಡ ಮತ್ತು ಆದಿವಾಸಿಗಳದ್ದಾಗಿರಬೇಕು ಎಂದು ಸಂಸದ ಅಸದುದ್ದೀನ್ ಉವೈಸಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಭೀವಂಡಿಯಲ್ಲಿ ಸಾರ್ವಜನಿಕ ಸಭೆಯ ವೇಳೆ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭಾರತ ನನ್ನದಲ್ಲ, ಠಾಕ್ರೆಯವರದ್ದಲ್ಲ, ಮೋದಿ-ಶಾ ಅವರದ್ದೂ ಅಲ್ಲ, ಭಾರತವು ಯಾರಿಗಾದರೂ ಸೇರುವುದರಿದ್ದರೆ ಅದು ದ್ರಾವಿಡ ಮತ್ತು ಆದಿವಾಸಿಗಳಿಗೆ ಸೇರಬೇಕು. ಮೊಘಲರ ನಂತರವಷ್ಟೇ ಆರೆಸ್ಸೆಸ್ ರಚನೆಯಾಗಿದೆ. ಆಫ್ರಿಕಾ, ಇರಾನ್, ಮಧ್ಯ ಏಷ್ಯಾ ಮತ್ತು ಪೂರ್ವ ಏಷ್ಯಾದಿಂದ ವಲಸೆ ಬಂದವರಿಂದ ಭಾರತ ರಚನೆಯಾಗಿದೆ. ಆದರೆ ದ್ರಾವಿಡರು ಮತ್ತು ಆದಿವಾಸಿಗಳು ಇಲ್ಲಿನ ಮೂಲ ನಿವಾಸಿಗಳು ಎಂದು ಕಿಡಿಕಾರಿದ್ದಾರೆ.
ಸಭೆಯಲ್ಲಿ ಎನ್‌ಸಿಪಿ, ಶಿವಸೇನೆ ಮತ್ತು ಬಿಜೆಪಿಯನ್ನು ಒಟ್ಟಾಗಿ ಟೀಕಿಸಿದ ಉವೈಸಿ, “ಬಿಜೆಪಿ, ಎನ್‌ಸಿಪಿ, ಕಾಂಗ್ರೆಸ್, ಎಸ್‌ಪಿ (ಸಮಾಜವಾದಿ ಪಕ್ಷ) ಜಾತ್ಯತೀತ ಪಕ್ಷಗಳು. ಅದರ ನಾಯಕರು ಜೈಲಿಗೆ ಹೋಗಬಾರದೆಂದು ಭಾವಿಸುತ್ತಾರೆ. ಆದರೆ ಮುಸ್ಲಿಮ್ ಮುಖಂಡರು ಜೈಲಿಗೆ ಹೋದರೆ ಪರವಾಗಿಲ್ಲ ಎಂದು ಭಾವಿಸಿದ್ದಾರೆ. ಶಿವಸೇನೆ ಸಂಸದ ಸಂಜತ್ ರಾವತ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಒತ್ತಾಯಿಸಲು ಶರದ್ ಪವಾರ್ ಎಂಬವರು ಪ್ರಧಾನಿ ಮೋದಿಯನ್ನು ಭೇಟಿಯಾಗುತ್ತಾರೆ. ಆದರೆ ಅದೇ ಶರದ್ ಪವಾರ್ ಅವರು ನವಾಬ್ ಮಲಿಕ್ ಪರವಾಗಿ ಯಾಕೆ ಆ ಕೆಲಸ ಮಾಡಿಲ್ಲ ಎನ್.ಸಿ.ಪಿ ಕಾರ್ಯಕರ್ತರಲ್ಲಿ ಪ್ರಶ್ನಿಸ ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ನವಾಬ್ ಮಲಿಕ್ ಅವರು ಸಂಜಯ್ ರಾವತ್ ಅವರಿಗಿಂತ ಕಡಿಮೆಯೇ?. ನೀವು ನವಾಬ್ ಮಲಿಕ್ ಪರವಾಗಿ ಯಾಕೆ ಮಾತನಾಡಲಿಲ್ಲ ಎಂದು ನಾನು ಶರದ್ ಪವಾರ್ ಅವರನ್ನು ಕೇಳ ಬಯಸುತ್ತೇನೆ. ಅವರು ಮುಸ್ಲಿಮ್ ಎಂಬ ಕಾರಣಕ್ಕಾಗಿಯೇ ಹೀಗೆ ಮಾಡಲಾಗಿದೆಯೇ?. ಸಂಜಯ್ ಮತ್ತು ನವಾಬ್ ಸಮಾನರಲ್ಲವೇ ಒಂದು ಉವೈಸಿ ಪ್ರಶ್ನಿಸಿದ್ದಾರೆ.
ಎಐಎಂಐಎಂ ಪಕ್ಷದ ಭೀವಂಡಿ ಮುಖಂಡ ಖಾಲಿದ್ ಗುಡ್ಡು ಅವರನ್ನು ಬಿಡುಗಡೆಗೊಳಿಸುವಂತೆ ಸಂಸದ ಉವೈಸಿ ಆಗ್ರಹಿಸಿದ್ದಾರೆ. ಖಾಲಿದ್ ಗುಡ್ಡು ಅವರನ್ನು ವಂಚನೆಯ ಪ್ರಕರಣದಲ್ಲಿ ಬಂಧಿಸಲಾಗಿದೆ. ಸದ್ಯ ಅವರು ಜೈಲಿನಲ್ಲಿದ್ದು, ಸುಳ್ಳು ಪ್ರಕರಣದಲ್ಲಿ ಬಂಧಿಸಿರುವ ಆತನನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಶಿವಸೇನೆ ಮತ್ತು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.