ಮುಂಬೈ: ಇ.ಡಿ. ನಿಯಂತ್ರಣವನ್ನು ಎರಡು ದಿನಗಳ ಕಾಲ ನಮಗೆ ನೀಡಿದರೆ, ದೇವೇಂದ್ರ ಫಡ್ನವಿಸ್ ಕೂಡ ಶಿವಸೇನೆಗೆ ಮತ ಹಾಕುತ್ತಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಶಿವಸೇನೆ ಅಭ್ಯರ್ಥಿ ಸಂಜಯ್ ಪವಾರ್ ಸ್ಥಾನವನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಈ.ಡಿ. ನಿಯಂತ್ರಣವನ್ನು ಎರಡು ದಿನಗಳ ಕಾಲ ನಮಗೆ ನೀಡಿದರೆ, ದೇವೇಂದ್ರ ಫಡ್ನವಿಸ್ ಕೂಡ ನಮಗೆ ಮತ ಹಾಕುತ್ತಾರೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವ ಪೀಯೂಷ್ ಗೋಯಲ್, ಮಾಜಿ ಸಚಿವ ಅನಿಲ್ ಬೊಂಡೆ, ಧನಂಜಯ ಮಹದಿಕ್ ಚುನಾಯಿತರಾಗಿದ್ದರೆ, ಮಹಾ ವಿಕಾಸ ಅಘಾಡಿ ಮೈತ್ರಿಕೂಟದಿಂದ ಶಿವಸೇನೆಯ ಸಂಜಯ ರಾವುತ್, ಎನ್ ಸಿಪಿಯ ಪ್ರಫುಲ್ ಪಟೇಲ್, ಕಾಂಗ್ರೆಸ್ಸಿನ ಇಮ್ರಾನ್ ಪ್ರತಾಪ್ ಗಢಿ ಅವರು ಆಯ್ಕೆಯಾಗಿದ್ದಾರೆ. ಆರನೇ ಸ್ಥಾನಕ್ಕೆ ಎನ್ ಸಿಪಿಯಿಂದ ಸಂಜಯ್ ಪವಾರ್ ಹಾಗೂ ಬಿಜೆಪಿಯಿಂದ ಮಹದಿಕ್ ಅವರು ಸ್ಪರ್ಧಿಸಿದ್ದರು. ಪಕ್ಷೇತರರ ಬೆಂಬಲವನ್ನು ಬಿಜೆಪಿ ಯಶಸ್ವಿಯಾಗಿದ್ದರಿಂದ ಧನಂಜಯ ಮಹದಿಕ್ ಗೆಲುವು ಸಾಧಿಸಿದ್ದರು.