Home ಟಾಪ್ ಸುದ್ದಿಗಳು ನನ್ನ ಜಾಗದಲ್ಲಿ ಸಿಟಿ ರವಿ ಇದ್ದಿದ್ದರೆ ಅರೆಸ್ಟ್ ಆಗಿ ಪೊಲೀಸರ ಬೂಟು ನೆಕ್ಕುತ್ತಿದ್ದರು: ಬಿ.ವಿ. ಶ್ರೀನಿವಾಸ್

ನನ್ನ ಜಾಗದಲ್ಲಿ ಸಿಟಿ ರವಿ ಇದ್ದಿದ್ದರೆ ಅರೆಸ್ಟ್ ಆಗಿ ಪೊಲೀಸರ ಬೂಟು ನೆಕ್ಕುತ್ತಿದ್ದರು: ಬಿ.ವಿ. ಶ್ರೀನಿವಾಸ್

ನವದೆಹಲಿ: ನನ್ನ ಜಾಗದಲ್ಲಿ ಸಿ.ಟಿ. ರವಿ ಇದ್ದಿದ್ದರೆ ಅರೆಸ್ಟ್ ಆಗಿ ಪೊಲೀಸರ ಬೂಟು ನೆಕ್ಕುತ್ತಿದ್ದರು ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.


ಮಂಗಳವಾರ ದೆಹಲಿಯಲ್ಲಿ ಪೊಲೀಸರು ಬಿ.ವಿ ಶ್ರೀನಿವಾಸ ಅವರನ್ನು ಬಂಧಿಸಲು ಬಂದಾಗ ಪ್ರತಿರೋಧ ಒಡ್ಡಿದ ಬಗ್ಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಗೆ ಉಜ್ವಲ ಭವಿಷ್ಯವಿದೆ. ಆದರೆ ರಾಜಕಾರಣದಲ್ಲಿ ಅಲ್ಲ, ರನ್ನಿಂಗ್ ರೇಸ್ ನಲ್ಲಿ ಎಂದು ಸಿಟಿ ರವಿ ವ್ಯಂಗ್ಯವಾಡಿದ್ದರು.


ಈ ಬಗ್ಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿರುವ ಬಿ.ವಿ ಶ್ರೀನಿವಾಸ, ಹಿಂದೆ ಸಾವರ್ಕರ್ ಅವರು ಬ್ರಿಟಿಷರ ಅಂಗಲಾಚಿದ ಹಾಗೆ ನನ್ನ ಜಾಗದಲ್ಲಿ ರವಿ ಇದ್ದಿದ್ದರೆ, ಪೊಲೀಸರಿಂದ ಅರೆಸ್ಟ್ ಆಗಿ ಅವರ ಬೂಟುಗಾಲು ನೆಕ್ಕುತ್ತಿದ್ದರು. ಅದರೆ ನಾವು ಸುಭಾಷ್ ಚಂದ್ರ ಭೋಸ್ ಮತ್ತು ಭಗತ್ ಸಿಂಗ್ ಅವರ ಹಾಗೆ ಹೋರಾಟ ಮಾಡುವವರು. ಮಧ್ಯರಾತ್ರಿಯಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದಕ್ಕೆ ಅವಾರ್ಡ್ ಕೊಡೋದಾದರೆ ಸಿ ಟಿ ರವಿಗೆ ಆಸ್ಕರ್ ಸಿಗುತ್ತದೆ. ಯಡಿಯೂರಪ್ಪನವರೇ ರವಿಯನ್ನು ಮೂರ್ಖ ಎಂದು ಹೇಳಿದ್ದರು. ಇನ್ನು ನಮ್ಮನ್ನು ಶಿಖಂಡಿ ಎಂದು ಅವರು ಹೇಳುತ್ತಾರಲ್ವಾ, ಈ ಆರೆಸ್ಸೆಸ್ ಗಿರಾಕಿಗಳೆಲ್ಲ ಶಿಖಂಡಿಗಳು ಎಂದು ಹೇಳಿದರು.

Join Whatsapp
Exit mobile version