Home ಕ್ರೀಡೆ ಐಸಿಸಿ ಅಂಡರ್-19 ಮಹಿಳಾ ವಿಶ್ವಕಪ್ ಟೂರ್ನಿ | ಭಾರತ ತಂಡಕ್ಕೆ ಶಫಾಲಿ ವರ್ಮಾ ನಾಯಕಿ

ಐಸಿಸಿ ಅಂಡರ್-19 ಮಹಿಳಾ ವಿಶ್ವಕಪ್ ಟೂರ್ನಿ | ಭಾರತ ತಂಡಕ್ಕೆ ಶಫಾಲಿ ವರ್ಮಾ ನಾಯಕಿ


ದಕ್ಷಿಣ ಆಫ್ರಿಕಾದಲ್ಲಿ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಚೊಚ್ಚಲ ಐಸಿಸಿ ಅಂಡರ್-19 ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಭಾರತದ ಹಿರಿಯರ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ, 19 ವರ್ಷದೊಳಗಿನವರ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿಯು ತಂಡವನ್ನು ಪ್ರಕಟ ಮಾಡಿದ್ದು, ಯುವ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.


16 ತಂಡಗಳನ್ನು ಒಳಗೊಂಡ 19 ವರ್ಷದೊಳಗಿನವರ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಮೊದಲ ಆವೃತ್ತಿಯು ಮುಂದಿನ ವರ್ಷ ಜನವರಿ 14 ರಿಂದ 29ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾ, ಯುಎಇ ಮತ್ತು ಸ್ಕಾಟ್ಲೆಂಡ್ ಜೊತೆಗೆ ಡಿ ಗುಂಪಿನಲ್ಲಿ ಭಾರತ ಸ್ಥಾನ ಪಡೆದಿದೆ.
ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಸುತ್ತಿಗೆ ಮುನ್ನಡೆಯುತ್ತವೆ, ಅಲ್ಲಿ ತಂಡಗಳನ್ನು ಆರು ಗುಂಪುಗಳಾಗಿ ಎರಡು ಗುಂಪುಗಳಾಗಿ ಪೂಲ್ ಮಾಡಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿದ್ದು, ಬ್ಯಾಟ್ ಜೆಬಿ ಮಾರ್ಕ್ಸ್ ಓವಲ್ ಮೈದಾನದಲ್ಲಿ ಜನವರಿ 27 ರಂದು ಸೆಮಿಫೈನಲ್ ಮತ್ತು ಜನವರಿ 29 ರಂದು ಫೈನಲ್ ಪಂದ್ಯ ನಡೆಯಲಿದೆ.


ಟಿ20 ವಿಶ್ವಕಪ್ಗೂ ಮುನ್ನ ಭಾರತ ಕಿರಿಯರ ತಂಡ ದಕ್ಷಿಣ ಆಫ್ರಿಕಾ ಎದುರು ಟಿ20 ಕ್ರಿಕೆಟ್ ಸರಣಿಯನ್ನೂ ಆಡಲಿದೆ. ಈ ಸರಣಿಯಲ್ಲೂ ವರ್ಮಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಶ್ವೇತಾ ಸೆಹ್ರಾವತ್ ಉಪನಾಯಕಿಯ ಜವಾಬ್ದಾರಿ ನಿರ್ಹಹಿಸಲಿದ್ದಾರೆ.
ಡಿಸೆಂಬರ್ 9ರಂದು ಮುಂಬೈನಲ್ಲಿಆಸ್ಟ್ರೇಲಿಯ ಮಹಿಳಾ ತಂಡದ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ರಿಚಾ ಘೋಷ್ ಮತ್ತು ಶಫಾಲಿ ವರ್ಮಾ ಇಬ್ಬರೂ ಭಾರತದ ಹಿರಿಯರ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಐಸಿಸಿ ಅಂಡರ್-19 ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡ
ಶಫಾಲಿ ವರ್ಮಾ (ನಾಯಕಿ), ಶ್ವೇತಾ ಸೆಹ್ರಾವತ್ (ಉಪನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಜಿ ತ್ರಿಶಾ, ಸೌಮ್ಯ ತಿವಾರಿ, ಸೋನಿಯಾ ಮೆಹದಿಯಾ, ಹರ್ಲಿ ಗಾಲಾ, ಹೃಷಿತಾ ಬಸು (ವಿಕೆಟ್ ಕೀಪರ್), ಸೋನಮ್ ಯಾದವ್, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಟಿಟಾಸ್ ಸಾಧು, ಫಲಕ್ ನಾಜ್, ಶಬ್ನಮ್ ಎಂಡಿ.
ಸ್ಟ್ಯಾಂಡ್ಬೈ ಆಟಗಾರರು: ಶಿಖಾ, ನಜ್ಲಾ ಸಿಎಂಸಿ, ಯಶಶ್ರೀ.

Join Whatsapp
Exit mobile version