ಐಸಿಸಿ Ranking: ಬೌಲಿಂಗ್’ನಲ್ಲಿ ಸಿರಾಜ್’ಗೆ ಅಗ್ರಸ್ಥಾನ

Prasthutha|

ದುಬೈ: ವರ್ಷದ ಮೊದಲ ಮತ್ತು ಎರಡನೇ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಮುಹಮ್ಮದ್ ಸಿರಾಜ್ ಅವರಿ ಐಸಿಸಿ ಏಕದಿನ ರಾಂಕಿಂಗ್ ನಲ್ಲಿ ಅಗ್ರ ಶ್ರೇಯಾಂಕವನ್ನು ಗಳಿಸಿದ್ದಾರೆ.

ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್, ಆಸ್ಟ್ರೇಲಿಯಾದ ಜೋಶ್ ಹೇಜಲ್‌’ವುಡ್ ಅವರನ್ನು ಹಿಂದಿಕ್ಕಿ ಸಿರಾಜ್ ಮೊದಲ ಬಾರಿಗೆ ಅಗ್ರ ಸ್ಥಾನಕ್ಕೆ ಏರಿದ್ದಾರೆ.

- Advertisement -

ಸಿರಾಜ್ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳಲ್ಲಿ ಒಂಬತ್ತು ಮತ್ತು ಕಿವೀಸ್ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳನ್ನು ಪಡೆದಿದ್ದಾರೆ. ಈ ಮೂಲಕ 729 ಪಾಯಿಂಟ್ಸ್ ಕಲೆ ಹಾಕಿದ ಮುಹಮ್ಮದ್ ಸಿರಾಜ್ ಐಸಿಸಿ ಬೌಲರ್’ಗಳ ರ್ಯಾಂಕಿಂಗ್’ನಲ್ಲಿ ಅಗ್ರ ಸ್ಥಾನಕ್ಕೆ ಜಿಗಿದರು.

- Advertisement -