Home ಟಾಪ್ ಸುದ್ದಿಗಳು ಯುಪಿಎಸ್ ಸಿ ಪರೀಕ್ಷೆ ಉತ್ತೀರ್ಣರಾದ ಫೈಝಾನ್ ಅಹ್ಮದ್ ಗೆ “ಏಸ್” ಅಕಾಡಮಿಯಿಂದ ಸನ್ಮಾನ

ಯುಪಿಎಸ್ ಸಿ ಪರೀಕ್ಷೆ ಉತ್ತೀರ್ಣರಾದ ಫೈಝಾನ್ ಅಹ್ಮದ್ ಗೆ “ಏಸ್” ಅಕಾಡಮಿಯಿಂದ ಸನ್ಮಾನ

ಮಂಗಳೂರು : ಐಎಎಸ್ ಪರೀಕ್ಷೆಯಲ್ಲಿ 58ನೇ Rank ಪಡೆದ ಫೈಝಾನ್ ಅಹ್ಮದ್ ಅವರನ್ನು ಮಂಗಳೂರಿನ ‘ ಏಸ್ ‘ ಐಎಎಸ್ ಅಕಾಡಮಿಯ ವತಿಯಿಂದ ಸನ್ಮಾನಿಸಲಾಯಿತು.
ನಗರದ ಎಂ.ಜಿ ರಸ್ತೆಯಲ್ಲಿರುವ ‘ ಏಸ್ ‘ ಐಎಎಸ್ ಸಂಸ್ಥೆಯ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಫೈಝಾನ್ ಅಹ್ಮದ್ ಅವರಿಗೆ ಸಂಸ್ಥೆಯ ಟ್ರಸ್ಟಿಗಳು ಸನ್ಮಾನ ಪತ್ರ ನೀಡಿ, ಶಾಲು ಹೊದಿಸಿ ಸನ್ಮಾನಿಸಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಫೈಝಾನ್ ಅಹ್ಮದ್, ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ನಿರಂತರ ವಾಗಿ ಪ್ರಯತ್ನಪಟ್ಟರೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಖಂಡಿತ ಯಶಸ್ಸನ್ನು ಸಾಧಿಸಬಹುದು ಎಂದು ಹೇಳಿದರು. ರಫೀಕ್ ಮಾಸ್ಟರ್ ಅವರು ಫೈಝಾನ್ ಅಹ್ಮದ್ ರ ಸಾಧನೆಯನ್ನು ವಿವರಿಸಿ, ಸನ್ಮಾನ ಪತ್ರ ವಾಚಿಸಿದರು. ಇದೇ ಸಂದರ್ಭ ಯುಪಿಎಸ್ಸಿ ಪರೀಕ್ಷೆಯ ಕೊನೆಯ ಹಂತದ ಸಂದರ್ಶನದವರೆಗೆ ತಲುಪಿದ ‘ ಏಸ್ ಐಎಎಸ್ ವಿದ್ಯಾರ್ಥಿಯಾದ ಮುಹಮ್ಮದ್ ಇಶ್ರತ್ ರನ್ನು ಸನ್ಮಾನಿಸಲಾಯಿತು. ನ್ಯಾಯವಾದಿ ಸಾದುದ್ದೀನ್ ಸಾಲಿಹಿ ಅವರು ಅಧ್ಯಕ್ಷತೆ ವಹಿಸಿದ್ದರು.


ಸಂಸ್ಥೆಯ ನಿರ್ದೇಶಕರಾದ ನಝೀರ್ ಅಹ್ಮದ್ ‘ ಏಸ್ ‘ ಐಎಎಸ್ ಅಕಾಡಮಿಯಲ್ಲಿ ತರಬೇತಿ ಪಡೆದು ಯಶಸ್ವಿಗಳಿಸಿ ಸರಕಾರಿ ಉದ್ಯೋಗದಲ್ಲಿರುವ ಸಂಸ್ಥೆಯ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಅಬೂಬಕರ್ ಸಿದ್ದೀಕ್ , ಬಿ.ಎಸ್. ಮುಹಮ್ಮದ್ ಬಶೀರ್, ನೌಷದ್ ಅಹ್ಮದ್ ಹಾಗು ಇತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಇಮ್ಮಿಯಾಝ್ ಖತೀಬ್ ವಂದಿಸಿದರು

Join Whatsapp
Exit mobile version