Home ಟಾಪ್ ಸುದ್ದಿಗಳು ರಾಜ್ಯ ರಾಜಕಾರಣಕ್ಕೆ ಮರಳಲ್ಲ, ದೆಹಲಿಯೇ ಫಿಕ್ಸ್ ಎಂದ ಶೋಭಾ ಕರಂದ್ಲಾಜೆ

ರಾಜ್ಯ ರಾಜಕಾರಣಕ್ಕೆ ಮರಳಲ್ಲ, ದೆಹಲಿಯೇ ಫಿಕ್ಸ್ ಎಂದ ಶೋಭಾ ಕರಂದ್ಲಾಜೆ

ಮೈಸೂರು: ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತೇನೆ ಎಂಬ ಕಪೋಕಲ್ಪಿತ ಸುದ್ದಿಗಳು ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರುವಾದುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ,  ಪಕ್ಷ ನನಗೆ ಕೇಂದ್ರ ಸಚಿವೆ ಎಂಬ ದೊಡ್ಡ ಹುದ್ದೆಯನ್ನೇ ನೀಡಿದೆ. ಸದ್ಯ ರಾಜ್ಯ ರಾಜಕಾರಣಕ್ಕೆ ನಾನಿಲ್ಲ ಎಂದಿದ್ದಾರೆ.

  ಸಿದ್ದರಾಮಯ್ಯರ ಗೋಮುಖ ವ್ಯಾಘ್ರತನ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಮೈಸೂರಿನ ಅಭಿವೃದ್ಧಿಗೆ ಅವರ ಕೊಡುಗೆ ಏನು ಎಂದು ಅವರು ಎದೆ ಮುಟ್ಟಿಕೊಂಡು ಹೇಳಲಿ. ಐದು ವರ್ಷದ ಆಡಳಿತದಲ್ಲಿ ಒಂದು ಅಭಿವೃದ್ಧಿ ನಿರ್ಧಾರಗಳನ್ನು ಕೈಗೊಳ್ಳಲಿಲ್ಲ. ಲಿಂಗಾಯತರನ್ನು ಒಡೆಯುವುದು, ಹಿಂದುಳಿದ ಜಾತಿಯನ್ನು ಒಡೆಯುವುದು ಅವರು ಮಾಡಿದ ಅಭಿವೃದ್ಧಿ ಕಾರ್ಯ. ಅಂದು ಕೆಲಸ ಮಾಡದವರು ಮುಂದೆ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

Join Whatsapp
Exit mobile version