Home ಟಾಪ್ ಸುದ್ದಿಗಳು ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕಾರಿಗೆ ಬೆಂಕಿ ಹಚ್ಚಿದ್ದನ್ನು ನಾನೇ ಹೊರುತ್ತೇನೆ: ಮೊಹಮ್ಮದ್ ನಲಪಾಡ್

ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕಾರಿಗೆ ಬೆಂಕಿ ಹಚ್ಚಿದ್ದನ್ನು ನಾನೇ ಹೊರುತ್ತೇನೆ: ಮೊಹಮ್ಮದ್ ನಲಪಾಡ್

ದಾವಣಗೆರೆ: ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರಿಗೆ ಬೆಂಕಿ ಇಟ್ಟ ಪ್ರಕರಣದ ಹೊಣೆಯನ್ನು ನಾಯಕನಾದ ನಾನೇ ಹೊತ್ತುಕೊಳ್ತೇನೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ತಿಳಿಸಿದ್ದಾರೆ. ಯೂತ್ ಕಾಂಗ್ರೆಸ್ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ. ಅದಕ್ಕೆ ಅವರ ನಾಯಕನಾದ ನಾನೇ ಹೊಣೆ ಆಗುತ್ತೇನೆ. ಬೇಸರದಿಂದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಈ ರೀತಿ ಮಾಡಿದ್ದಾರೆ ಎಂದರು.

ನಾನೇನು ಎಲ್ಲಿ ಓಡಿ ಹೋಗಿಲ್ಲ. ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ತನಿಖೆಗೆ ಕರೆದರೆ ನಾನು ಹೋಗುತ್ತೇನೆ. ನಾನೇನು ಟೆರರಿಸ್ಟ್ ಕ್ರಿಮಿನಲ್ ಆಗಿರೋ ತರ ಮಾಡ್ತಾರೆ. ಬಿಜೆಪಿ ಇಡಿ ಐಟಿ ಯನ್ನು ಕಲೆಕ್ಷನ್ ಗೆ ಬಳಕೆ ಮಾಡಿಕೊಳ್ಳುತ್ತಿದೆ. ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಅಮೃತ ಮಹೋತ್ಸವ ಹಿನ್ನೆಲೆ ನಾನು ಸಿದ್ಧತೆ ನೋಡಿಕೊಂಡು ಬಂದಿದ್ದೇವೆ. ಇದು ಶಕ್ತಿ ಪ್ರದರ್ಶನ, ವ್ಯಕ್ತಿ ಪೂಜೆ ಅಲ್ಲ. 13 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ ಅವರಿಗೆ ಒಂದು ಗೌರವ ನೀಡುವ ಕಾರ್ಯಕ್ರಮ. ಸಾಮೂಹಿಕ ನಾಯಕತ್ವ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರು.

Join Whatsapp
Exit mobile version