ಜೈಲಿನಿಂದಲೇ ಸರ್ಕಾರ ನಡೆಸುತ್ತೇನೆ: ಕೇಜ್ರಿವಾಲ್ ಘೋಷಣೆ

Prasthutha|

ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಅಗತ್ಯವಿದ್ದರೆ ಜೈಲಿನಿಂದಕೇ ಸರ್ಕಾರವನ್ನು ನಡೆಸುತ್ತೇನೆ ಎಂದು ಜಿಲ್ಲಾ ನ್ಯಾಯಾಲಯದಿಂದ 6 ದಿನಗಳ ED ಬಂಧನಕ್ಕೆ ಒಳಗಾದ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

- Advertisement -

ನ್ಯಾಯಾಲಯ ಜಾರಿ ನಿರ್ದೇಶನಾಲಯಕ್ಕೆ ತಮ್ಮ ಕಸ್ಟಡಿಯನ್ನು ನೀಡಿದ ಕೂಡಲೇ ಕೇಜ್ರಿವಾಲ್ ಈ ಘೋಷಣೆ ಮಾಡಿದ್ದಾರೆ. ನಾನು ದೆಹಲಿಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ,.ಅಗತ್ಯವಿದ್ದರೆ ನಾನು ಸರ್ಕಾರವನ್ನು ಜೈಲಿನಿಂದ ನಡೆಸುತ್ತೇನೆ ಎಂದು ಮಾಧ್ಯಮವೊಂದಕ್ಕೆ ಅವರು ತಿಳಿಸಿದ್ದಾರೆ.

ಅಂದರ್ ಹೋ ಯಾ ಬಹರ್, ಸರ್ಕಾರ್ ವಹೀ ಸೆ ಚಲೇಗಿ (ಜೈಲಿನ ಒಳಗಿರಲಿ ಅಥವಾ ಹೊರಗಿರಲಿ, ಸರ್ಕಾರ ಅಲ್ಲಿಂದ ನಡೆಯುತ್ತದೆ’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರು ಹೇಳಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

- Advertisement -

ದೆಹಲಿ ನ್ಯಾಯಾಲಯದಲ್ಲಿ ಮೂರು ಗಂಟೆಗಳ ಸುದೀರ್ಘ ವಿಚಾರಣೆಯ ನಂತರ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ, ಕೇಜ್ರಿವಾಲ್ ಅವರನ್ನು ಅವರ ಅಧಿಕೃತ ನಿವಾಸದಿಂದ ತನಿಖಾ ಸಂಸ್ಥೆ ಬಂಧಿಸಿದ ಒಂದು ದಿನದ ನಂತರ ಮಾರ್ಚ್ 28 ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಕಳುಹಿಸಿದರು.

ಪ್ರಕರಣದಲ್ಲಿ 10 ದಿನಗಳ ಕಸ್ಟಡಿಗೆ ಇಡಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಾಲಯ ಈ ಆದೇಶ ನೀಡಿದೆ.



Join Whatsapp