ಶಿವಮೊಗ್ಗ: ನನಗೂ ನನ್ನ ಮಗನಿಗೂ ಭವಿಷ್ಯ ಇಲ್ಲ ಅಂತಾ ಗೊತ್ತಿದ್ದೇ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಅನೇಕರು ಹೇಳಿದ್ರು, ಬೇಡ ಸರ್ ಬಹಳ ದೊಡ್ಡ ಸಾಹಸಕ್ಕೆ ಕೈ ಹಾಕ್ತಿದ್ದೀರಾ. ನಿಮಗೂ ಭವಿಷ್ಯ ಇರಲ್ಲ, ನಿಮ್ಮ ಮಗನಿಗೂ ಭವಿಷ್ಯ ಇರಲ್ಲ ಅಂದ್ರು. ನಾನು ನನ್ನ ಮಗನ ಜೊತೆ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಂಡಿದ್ದೇನೆ. ನನಗೂ ನನ್ನ ಮಗನಿಗೂ ಭವಿಷ್ಯ ಇಲ್ಲ ಅಂತಾ ಗೊತ್ತಿದ್ದೇ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದರು.
ರಾಮನ ಆದರ್ಶ ಇಟ್ಟುಕೊಂಡು ನರೇಂದ್ರ ಮೋದಿ ಭಾರತದ ಸಂಸ್ಕೃತಿಯನ್ನು ವಿಶ್ವದಾದ್ಯಂತ ಹರಡಲು ಪೂರ್ಣ ಸಹಕಾರ ಕೊಡುತ್ತಿದ್ದಾರೆ. ನರೇಂದ್ರ ಮೋದಿ ಆಡಳಿತವನ್ನು ಪ್ರಪಂಚವೇ ಮೆಚ್ಚುತ್ತಿದೆ. ವಿಶ್ವ ಶಾಂತಿಗೆ ನಾಂದಿ ಆಗುತ್ತದೆ ಎಂದರು.