ಟಿಪ್ಪು ಜಯಂತಿ ಅಗತ್ಯ ಮುಸ್ಲಿಮರಿಗೆ ಇಲ್ಲವೆಂದು ಸಿದ್ದರಾಮಯ್ಯಗೆ ಹೇಳಿದ್ದೆ: ಸಿ ಎಂ ಇಬ್ರಾಹಿಂ

Prasthutha|


ಮೈಸೂರು: ಟಿಪ್ಪು ಜಯಂತಿಯ ಅಗತ್ಯ ಮುಸ್ಲಿಮರಿಗೆ ಇಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಹೇಳಿದ್ದೆ. ಆದರೆ, ಅವರು ಕೇಳಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಪ್ರತಿಮೆ ಸ್ಥಾಪನೆ ಸಂಬಂಧ ಶಾಸಕ ತನ್ವೀರ್ ಸೇಠ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಮ್ಮ ಸಮುದಾಯದಲ್ಲಿ ಪ್ರತಿಮೆ, ಮೂರ್ತಿ ಎಂಬುವುದಿಲ್ಲ. ಹೀಗಾಗಿ ಟಿಪ್ಪು ಪ್ರತಿಮೆ ನಿರ್ಮಿಸುವ ಪ್ರಶ್ನೆಯೇ ಇಲ್ಲ. ರಾಜಕೀಯಕ್ಕಾಗಿ ಧರ್ಮ ಬಳಸಿಕೊಳ್ಳಬಾರದು. ನಮ್ಮ ಇಸ್ಲಾಂ ಧರ್ಮದಲ್ಲಿ ಜಗತ್ತಿನ ಯಾವ ಭಾಗದಲ್ಲೂ ಎಲ್ಲಿಯೂ ಪ್ರತಿಮೆ ನಿರ್ಮಿಸಿಲ್ಲ. ಹೀಗಾಗಿ ನಾವು ಟಿಪ್ಪು ಪ್ರತಿಮೆ ನಿರ್ಮಿಸಲ್ಲ ಎಂದರು.
ಬಿಜೆಪಿ – ಕಾಂಗ್ರೆಸ್ ಟಿಪ್ಪು ಹೆಸರಲ್ಲಿ ರಾಜಕೀಯ ಮಾಡುತ್ತಿವೆ. ರಾಜಕೀಯ ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಿ ಎಂದು ಹೇಳಿದರು.

Join Whatsapp
Exit mobile version