Home ಟಾಪ್ ಸುದ್ದಿಗಳು ನನಗೆ ಸಚಿವ ಸ್ಥಾನ ಕೊಡಲೇಬೇಕು: ಉಪ ಸ್ಪೀಕರ್ ಆನಂದ್ ಮಾಮನಿ ಪಟ್ಟು

ನನಗೆ ಸಚಿವ ಸ್ಥಾನ ಕೊಡಲೇಬೇಕು: ಉಪ ಸ್ಪೀಕರ್ ಆನಂದ್ ಮಾಮನಿ ಪಟ್ಟು

ಬೆಂಗಳೂರು: ವಿಧಾನ ಸಭೆ ಉಪ ಸ್ಪೀಕರ್ ಆನಂದ್ ಮಾಮನಿಯವರು ತನಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ನಾನು ಮೂರು ಬಾರಿ ಶಾಸಕನಾಗಿದ್ದೇನೆ. ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಯವರಿಗೆ ಈ ಬಗ್ಗೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಾಗಲಿ. ಕೇವಲ ಕ್ಷೇತ್ರದ ಅಭಿವೃದ್ಧಿಗಾಗಿ ಮಾತ್ರವಲ್ಲ ರಾಜ್ಯದ ಕೆಲಸ ಮಾಡಲೂ ನನಗೆ ಅವಕಾಶ ಸಿಗಬೇಕು. ಆದ್ದರಿಂದ ನನಗೆ ಸಚಿವ ಸ್ಥಾನ ಬೇಕೇಬೇಕು. ಹಿರಿಯರನ್ನು ಕೈಬಿಡಬೇಕೆಂದು ನಾನು ಹೇಳುವುದಿಲ್ಲ. ಅದು ಸರಿಯಾದ ರೀತಿಯೂ ಅಲ್ಲ. ಅದನ್ನು ಮುಖ್ಯಮಂತ್ರಿ ಮತ್ತು ಹಿರಿಯ ನಾಯಕರು ನಿರ್ಧರಿಸಬೇಕು ಎಂದು ಹೇಳಿದರು.

Join Whatsapp
Exit mobile version