Home ಟಾಪ್ ಸುದ್ದಿಗಳು ಕುಮಾರಸ್ವಾಮಿಗೆ ಯಾವ ದಾಖಲೆ ಬೇಕೋ ಕೊಡ್ತೇನೆ: ಡಿ.ಕೆ.ಶಿವಕುಮಾರ್

ಕುಮಾರಸ್ವಾಮಿಗೆ ಯಾವ ದಾಖಲೆ ಬೇಕೋ ಕೊಡ್ತೇನೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಏನೇನು ಪಟ್ಟಿ ಕೊಡ್ತಾರೆ, ಅದಕ್ಕೆ ಲೆಕ್ಕ ಕೊಡೋಣ. ತಪ್ಪು ಮಾಡಿದ್ದರೆ ಬೇಕಾದರೆ ಗಲ್ಲಿಗೆ ಹಾಕಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.


ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲುಲು ಮಾಲ್ ಜಮೀನಿನ ಕುರಿತು ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.


“ಜನರೇ ಅವರಿಗೆ ಉತ್ತರ ಕೊಟ್ಟಿದ್ದಾರೆ. ಅವರ ಮಾತು, ಆಚಾರ, ವಿಚಾರಕ್ಕೆ ಉತ್ತರ ನೀಡಿದ್ದಾರೆ. ಇನ್ನೂ ಏನು ಬೇಕಾದರೂ ನಾನು ಉತ್ತರ ಕೊಡುತ್ತೇನೆ. ನಾನು ಮಾಲ್ ಕಟ್ಟಿರುವ ಜಾಗ ಕೇಂದ್ರ ಸರ್ಕಾರ ಒಂದು ಸಂಸ್ಥೆಯದ್ದು. ಅವರು ದಾಖಲೆ ಮಾಡಿ ಟೆಂಡರ್ ಹಾಕಿದ್ದಾರೆ. ಅದನ್ನು ನಮ್ಮ ಸ್ನೇಹಿತರು ತೆಗೆದುಕೊಂಡಿದ್ದರು. ಅದನ್ನು ನಾನು ಅವರ ಬಳಿ ತೆಗೆದುಕೊಂಡಿದ್ದೇನೆ. ಏನಾದರೂ ತಪ್ಪು ಮಾಡಿದ್ದರೆ ಬೇಕಾದರೆ ಗಲ್ಲಿಗೆ ಹಾಕಲಿ. ಅವರಿಗೆ ಇನ್ನೂ ಗೊತ್ತಿಲ್ಲ. ಅವರ ತಂದೆ 10-15 ವರ್ಷದ ಹಿಂದೆಯೇ ತನಿಖೆ ಮಾಡಿಸಿದ್ದಾರೆ” ಎಂದರು.

Join Whatsapp
Exit mobile version