Home ಟಾಪ್ ಸುದ್ದಿಗಳು ಅತ್ಯಾಚಾರ ಪ್ರಕರಣದ ಆರೋಪಿ ಗುರ್ಮಿತ್ ರಾಮ್‌ ಬಿಡುಗಡೆಯಲ್ಲಿ ನನ್ನ ಪಾತ್ರವಿಲ್ಲ ಎಂದ ಹರಿಯಾಣ ಮುಖ್ಯಮಂತ್ರಿ

ಅತ್ಯಾಚಾರ ಪ್ರಕರಣದ ಆರೋಪಿ ಗುರ್ಮಿತ್ ರಾಮ್‌ ಬಿಡುಗಡೆಯಲ್ಲಿ ನನ್ನ ಪಾತ್ರವಿಲ್ಲ ಎಂದ ಹರಿಯಾಣ ಮುಖ್ಯಮಂತ್ರಿ

ನವದೆಹಲಿ: ಇತ್ತೀಚೆಗೆ ಪರೋಲ್‌ ನಲ್ಲಿ ಬಿಡುಗಡೆಯಾಗಿರುವ ಅತ್ಯಾಚಾರ ಪ್ರಕರಣದ ಆರೋಪಿ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್ ರಾಮ್‌ ರಹೀಮ್‌ ಸಿಂಗ್‌ ಬಿಡುಗಡೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಹೇಳಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಖಟ್ಟರ್, ಕೋರ್ಟ್‌, ಜೈಲು ಶಿಕ್ಷೆಯನ್ನು ನೀಡಿದೆ. ತಪ್ಪಿತಸ್ಥ ಜೈಲಿಗೆ ಹೋಗಬೇಕು. ಆದಾದ ಬಳಿಕ ಜೈಲಿನಲ್ಲಿ ಕೆಲವು ಕಾನಾನೂಗಳು ಇರುತ್ತವೆ. ಅವುಗಳು ಎಲ್ಲ ಕೈದಿಗಳಿಗೂ ಅನ್ವಯಿಸುತ್ತವೆ. ಜೈಲಿನಿಂದ ಬಿಡುಗಡೆ ಮಾಡಿರುವ ವಿಚಾರದಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಎಂದು ಹೇಳಿದರು.


2017ರಲ್ಲಿ ಸಿರ್ಸಾದ ತಮ್ಮ ಆಶ್ರಮದಲ್ಲಿನ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಗುರ್ಮಿತ್ ರಾಮ್‌ ರಹೀಮ್‌ ಸಿಂಗ್‌, ಕಳೆದ ವಾರ 40 ದಿನಗಳ ಪರೋಲ್‌ ನಲ್ಲಿ ಹರಿಯಾಣದ ರೋಹ್ಟಕ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.


ರಾಮ್‌ ರಹೀಮ್‌ ಕಳೆದ ಕೆಲವು ದಿನಗಳಿಂದ ಆನ್‌ಲೈನ್‌ ಮೂಲಕ ಆರಂಭಿಸಿರುವ ಪ್ರವಚನಗಳಲ್ಲಿ ಗುರ್ಮಿತ್ ರಾಮ್‌ ಅವರ ಬೆಂಬಲಿಗರು ಸೇರಿದಂತೆ ಹರಿಯಾಣದ ಬಿಜೆಪಿಯ ಹಲವು ಮುಖಂಡರು ಪಾಲ್ಗೊಂಡಿದ್ದಾರೆ.


ಕಳೆದ ಫೆಬ್ರವರಿ ತಿಂಗಳಲ್ಲಿ, ಪಂಜಾಬ್‌ ವಿಧಾನಸಭೆ ಚುನಾವಣೆಗೂ ಮುನ್ನ ರಾಮ್‌ ರಹೀಮ್‌ಗೆ ಮೂರು ವಾರಗಳ ಪರೋಲ್ ನೀಡಲಾಗಿತ್ತು.ಇದೀಗ ನವೆಂಬರ್‌ 3ರಂದು ಅದಮ್‌ಪುರ್‌ ಉಪಚುನಾವಣೆ ಮತ್ತು ಪಂಚಾಯಿತಿ ಚುನಾವಣೆಗಳು ಹತ್ತಿರದಲ್ಲೇ ನಡೆಯಲಿದ್ದು, ಇದೇ ವೇಳೆ ರಹೀಮ್‌ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿರುವ ಬಗ್ಗೆ ಹಲವು ಅನುಮಾನಗಳು ಸೃಷ್ಟಿಯಾಗಿವೆ.

Join Whatsapp
Exit mobile version