Home ಟಾಪ್ ಸುದ್ದಿಗಳು ನಾನು ಮುಖ್ಯಮಂತ್ರಿಗಳ ವಿರುದ್ಧ ಯಾವತ್ತೂ ದೂರು ನೀಡಿಲ್ಲ : ಈಶ್ವರಪ್ಪ

ನಾನು ಮುಖ್ಯಮಂತ್ರಿಗಳ ವಿರುದ್ಧ ಯಾವತ್ತೂ ದೂರು ನೀಡಿಲ್ಲ : ಈಶ್ವರಪ್ಪ

ಬೆಂಗಳೂರು : ತಾನು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಯಾವತ್ತೂ ದೂರು ನೀಡಿಲ್ಲ. ಇನ್ನು ಮುಂದೆ ದೂರು ನೀಡುವುದೂ ಇಲ್ಲ. ಇಲಾಖೆಯಲ್ಲಿ ಮುಖ್ಯಮಂತ್ರಿಗಳ ಹಸ್ತಕ್ಷೇಪದ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಗವರ್ನರ್ ಬಳಿ ಹೋಗಿದ್ದೆ. ನಮ್ಮದು ಒಂದೇ ಕುಟುಂಬ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

“ನನ್ನ ಜೀವನದಲ್ಲಿ ನಾನು ಸ್ಪೋಟ ಆಗಲ್ಲ. ಸತ್ಯ ಕಂಡಾಗ ನಾನು ಮುನ್ನುಗ್ಗುವವನೇ. ಕುತ್ತಿಗೆ ಕುಯ್ದರೂ ನಾನು ದಾರಿ ತಪ್ಪುವುದಿಲ್ಲ. ಮುಖ್ಯಮಂತ್ರಿಗಳ ಹಸ್ತಕ್ಷೇಪದ ಬಗ್ಗೆ ಸಿಟಿ ರವಿ, ನಳಿನ್ ಕುಮಾರ್ ಕಟೀಲ್, ಅರುಣ್ ಸಿಂಗ್ ಗಮನಕ್ಕೆ ತಂದಿದ್ದೇನೆ. ಇದರ ಬದಲಾಗಿ ಹೆಚ್ ಡಿ ದೇವೇಗೌಡ, ಡಿಕೆ ಶಿವಕುಮಾರ್ ಗೆ ದೂರು ಕೊಡೋಕೆ ಆಗುತ್ತಾ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಶ್ನಿಸಿದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಯಡಿಯೂರಪ್ಪ ನಮ್ಮ ನಾಯಕ, ನಮ್ಮ ಮುಖ್ಯಮಂತ್ರಿ. ನಮ್ಮದು ಒಂದೇ ಕುಟುಂಬ. ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿಲ್ಲ. ಇಲಾಖೆಯಲ್ಲಿ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡುವಂತಿಲ್ಲ. ಸ್ಪಷ್ಟೀಕರಣಕ್ಕಾಗಿ ಗವರ್ನರ್ ಬಳಿ ಹೋಗಿದ್ದೆ ಅಷ್ಟೇ. ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಈಗಲೂ ಬಿಎಸ್ ಯಡಿಯೂರಪ್ಪ ನಮ್ಮ ನಾಯಕರು. ನಾನು ಮುಖ್ಯಮಂತ್ರಿಗಳ ವಿರುದ್ಧ ದೂರು ಕೊಡಲಿಲ್ಲ. ಮುಂದೆಯೂ ಬಿಎಸ್ ಯಡಿಯೂರಪ್ಪ ವಿರುದ್ಧ ದೂರು ಕೊಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇಲಾಖೆಯ ಹಣವನ್ನು ತನ್ನ ಗಮನಕ್ಕೆ ಬಾರದೆಯೇ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಮರಿಸ್ವಾಮಿಗೆ ನಿಯಮ ಬಾಹಿರವಾಗಿ ಬಿಡುಗಡೆಗೆ ಸೂಚಿಸಿದ ಮುಖ್ಯಮಂತ್ರಿಗಳ ನಡೆಯ ಬಗ್ಗೆ ರಾಜ್ಯಪಾಲರಿಗೆ, ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾಗಿ ತಮ್ಮ ಪತ್ರ ಬರೆದ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಈಶ್ವರಪ್ಪ, ತಾನು ನಿಯಮಗಳ ಪಾಲನಗೆಗಾಗಿ ರಾಜ್ಯಪಾಲರಿಗೆ ಪತ್ರ ಬರೆದಿರುವುದಾಗಿ ಈ ಹಿಂದೆ ತಿಳಿಸಿದ್ದರು.

Join Whatsapp
Exit mobile version