Home ಟಾಪ್ ಸುದ್ದಿಗಳು ಸಂವಿಧಾನದ ಮೇಲೆ ನನಗೆ ನಂಬಿಕೆ ಇದೆ, ಆದರೆ ನ್ಯಾಯ ವಿಳಂಬವಾಗಿದೆ : ಸಿದ್ದೀಕ್ ಕಾಪ್ಪನ್

ಸಂವಿಧಾನದ ಮೇಲೆ ನನಗೆ ನಂಬಿಕೆ ಇದೆ, ಆದರೆ ನ್ಯಾಯ ವಿಳಂಬವಾಗಿದೆ : ಸಿದ್ದೀಕ್ ಕಾಪ್ಪನ್

ಹೊಸದಿಲ್ಲಿ : ಉತ್ತರಪ್ರದೇಶ ಪೊಲೀಸರು ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಸಂವಿಧಾನದ ಮೇಲೆ ನನಗೆ ನಂಬಿಕೆ ಇದೆ, ನ್ಯಾಯ ಬೇಕು. ಆದರೆ ಈಗ ನ್ಯಾಯ ವಿಳಂಬವಾಗುತ್ತಿದೆ ಎಂದು ಪತ್ರಕರ್ತ ಸಿದ್ದೀಕ್ ಕಾಪ್ಪನ್ ಆರೋಪಿಸಿದ್ದಾರೆ.

ಮಥುರಾದ ನ್ಯಾಯಾಲಯದಿಂದ ಜೈಲಿಗೆ ಮರಳುತ್ತಿದ್ದಾಗ ಮಾಧ್ಯಮಗಳಿಗೆ ಕಾಪ್ಪನ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಅದೇ ವೇಳೆ ಕಾಪ್ಪನ್ ಬಂಧನಕ್ಕಾಗಿ ಅವರ ವಿರುದ್ಧ ದಾಖಲಿಸಿದ್ದ ಮೊದಲ ಆರೋಪವನ್ನು ಮಥುರಾ ನ್ಯಾಯಾಲಯ ಕೈಬಿಟ್ಟಿದೆ. ಮಥುರಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಹತ್ರಾಸ್ ಅತ್ಯಾಚಾರ ನಡೆದ ಸಮಯದಲ್ಲಿ ಶಾಂತಿ ಕೆಡಿಸಲು ಪ್ರಯತ್ನಿಸಿದ ಆರೋಪವನ್ನು ಕೈಬಿಟ್ಟಿದ್ದರು.

ಸುಳ್ಳು ಪ್ರಕರಣವಿದು, ನ್ಯಾಯ ವಿಳಂಬವಾಗಿದೆ, ಆದರೆ ಸಂವಿಧಾನದ ಮೇಲೆ ನಂಬಿಕೆಯಿದೆ: ಬಂಧಿತ ಪತ್ರಕರ್ತ ಸಿದ್ದೀಕ್ ಕಾಪ್ಪನ್

ಕಳೆದ ಅಕ್ಟೋಬರ್ 5ರಂದು ಹತ್ರಾಸ್ ಗೆ ಭೇಟಿ ನೀಡಿದ್ದ ವೇಳೆ ಬಂಧಿಸಲ್ಪಟ್ಟ ಸಿದ್ದೀಕ್ ಕಾಪ್ಪನ್ ಮತ್ತು ಇತರ ಮೂವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಹೊರಿಸಿದ ಮೊದಲ ಆರೋಪವೆಂದರೆ ಅವರು ಶಾಂತಿ ಕೆಡಿಸಲು ಪ್ರಯತ್ನಿಸಿರುವುದಾಗಿದೆ.

ಹತ್ರಾಸ್ ನಲ್ಲಿ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ವರದಿ ಮಾಡಲು ತೆರಳಿದ್ದ ಸಿದ್ದೀಕ್ ಕಾಪ್ಪನ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.

Join Whatsapp
Exit mobile version