Home ಟಾಪ್ ಸುದ್ದಿಗಳು ಅತ್ತೆ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಅತ್ಯಾಚಾರಕ್ಕೊಳಗಾಗಿದ್ದೇನೆ : ಹಿಂದೂ ಮಹಾಪಂಚಾಯತ್ ಸಂಘಟಕನ ಪತ್ನಿ ಆರೋಪ

ಅತ್ತೆ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಅತ್ಯಾಚಾರಕ್ಕೊಳಗಾಗಿದ್ದೇನೆ : ಹಿಂದೂ ಮಹಾಪಂಚಾಯತ್ ಸಂಘಟಕನ ಪತ್ನಿ ಆರೋಪ

ನವದೆಹಲಿ: ತನ್ನ ಗಂಡ, ಮೈದುನ, ಮಾವ ಮತ್ತು  ಗಂಡನ ಸ್ನೇಹಿತನಿಂದ ಕಳೆದ ಎರಡು ವರ್ಷಗಳಿಂದ ಪದೇ ಪದೇ ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ವಿವಾದಿತ ಹಿಂದೂ ಮಹಾಪಂಚಾಯತ್ ಸಂಘಟಕ ಪ್ರೀತ್ ಸಿಂಗ್ ನ ಪತ್ನಿ ದೂರು ನೀಡಿದ್ದಾರೆ.

“ನನ್ನ ಅತ್ತೆಯ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಪದೇ ಪದೇ ಅತ್ಯಾಚಾರಕ್ಕೊಳಗಾಗಿದ್ದೇನೆ. ಕಳೆದ ಮೂರು ವರ್ಷಗಳಿಂದ ತನ್ನ ಪೋಷಕರ ಬಳಿಗೆ ಹೋಗಲು ಅಥವಾ ನೆರೆಹೊರೆಯವರೊಂದಿಗೆ ಮಾತನಾಡಲು ಪ್ರೀತ್ ನನ್ನನ್ನು ಬಿಡುತ್ತಿರಲಿಲ್ಲ. ನಾನು ಬೇಡ ಎಂದಾಗಲೆಲ್ಲಾ ಅವರು ನನ್ನನ್ನು ಹೊಡೆಯುತ್ತಿದ್ದರು. ನನಗೆ ಅವಕಾಶ ಸಿಕ್ಕ ಕ್ಷಣ, ನಾನು ನನ್ನ ಮಗನ ಕೈ ಹಿಡಿದು ಓಡಿಬಂದೆ.ನಾನು ಇನ್ನೂ ಇದನ್ನೆಲ್ಲ ಸಹಿಸಲು ಸಾಧ್ಯವಿಲ್ಲ ಎಂದು 32 ವರ್ಷದ ನಿತ್ಯಾ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಕಳೆದ 10 ದಿನಗಳಲ್ಲಿ ಸಿಂಗ್ ಅವರ ಸ್ನೇಹಿತರಿಂದ ತನಗೆ ಬೆದರಿಕೆಗಳು ಬಂದಿದ್ದು, ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರಿದ್ದಾರೆ ಎಂದು ನಿತ್ಯಾ ಆರೋಪಿಸಿದ್ದಾರೆ.

ನಿತ್ಯಾ ಅವರು ನೀಡಿದ ದೂರಿನ ಆಧಾರದ ಮೇಲೆ, ಆಕೆಯ ಗಂಡ, ಮೈದುನ, ಮಾವ ಮತ್ತು ಅತ್ತೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ ಮತ್ತು ಜೀವ ಹಾನಿಗೆ ಸಂಬಂಧಿಸಿದ ಸೆಕ್ಷನ್ಗಳ ಅಡಿಯಲ್ಲಿ ಎಫ್‌ ಐಆರ್ ದಾಖಲಾಗಿದೆ.

ಸಿಂಗ್ ಮತ್ತು ಅವರ ತಂದೆ ಸುಂದರ್ ಪಾಲ್ ಈಗ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಅರೆಸ್ಟ್ ವಾರಂಟ್ ಹೊರಡಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಎಂದು ತನಿಖಾಧಿಕಾರಿ ಮೀನಾಕ್ಷಿ ಸಿಂಗ್ ಮಾಹಿತಿ ನೀಡಿದ್ದಾರೆ.

Join Whatsapp
Exit mobile version