►ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಬಿಜೆಪಿ ಮುಖಂಡ
ಚಿಕ್ಕಮಗಳೂರು: ‘ಮನಸ್ಸಿನಲ್ಲಿ ಬಹಳ ನೋವುಗಳಿವೆ. ರಾಷ್ಟ್ರದ ಹಿತಕ್ಕಾಗಿ ಎಲ್ಲವನ್ನು ನುಂಗಿಕೊಂಡಿದ್ದೇನೆ. ಲೋಕಸಭೆ ಚುನಾವಣೆ ಬಳಿಕ ಎಲ್ಲವನ್ನೂ ಜನರ ಮುಂದಿಡುತ್ತೇನೆ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಯಾರು ಹೇಗೆ ನಡೆದುಕೊಂಡರು ಎಂದು ಗೊತ್ತಿದೆ. ಹೆಚ್ಚು ದಿನ ಮನಸ್ಸಿನಲ್ಲೇ ಇಟ್ಟು ಕೊಳ್ಳಲಾಗದು ಅವುಗಳನ್ನು ಹೇಳಲೇಬೇಕು. ವೈಯಕ್ತಿಕ ನೆಲೆಯಲ್ಲಿ ಲೋಕಸಭೆ ಚುನಾವಣೆ ನಂತರ ಮಾಡುತ್ತೇನೆ’ ಎಂದು ಯಾರ ಹೆಸರನ್ನೂ ಹೇಳದೆ ಸ್ವಪಕ್ಷದವರ ವಿರುದ್ಧ ಸುದ್ದಿಗಾರರ ಬಳಿ ಅಸಮಾಧಾನ ವ್ಯಕ್ತಪಡಿಸಿದರು.