Home ಟಾಪ್ ಸುದ್ದಿಗಳು RSS ಸಭೆಯಲ್ಲಿ ಭಾಗವಹಿಸಿದ್ದಕ್ಕೆ ತಂದೆಯೊಡನೆ ಜಗಳವಾಡಿದ್ದೆ: ಪ್ರಣವ್ ಮುಖರ್ಜಿ ಪುತ್ರಿ

RSS ಸಭೆಯಲ್ಲಿ ಭಾಗವಹಿಸಿದ್ದಕ್ಕೆ ತಂದೆಯೊಡನೆ ಜಗಳವಾಡಿದ್ದೆ: ಪ್ರಣವ್ ಮುಖರ್ಜಿ ಪುತ್ರಿ

ನವದೆಹಲಿ: ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ತಂದೆ ಪಾಲ್ಗೊಂಡಿದಕ್ಕಾಗಿ ತಾನು ಅವರ ಜೊತೆ ಕೆಲ ದಿನಗಳ ಕಾಲ ಜಗಳವಾಡಿದ್ದೆ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪುತ್ರಿ ಶರ್ಮಿಷ್ಠ ಮುಖರ್ಜಿ ಹೇಳಿದ್ದಾರೆ.

‘ಪ್ರಣಬ್‌ ಮೈ ಫಾದರ್‌: ಎ ಡಾಟರ್‌ ರಿಮೆಂಬರ್ಸ್‌’ ಎಂಬ ಕೃತಿಯನ್ನು ಶರ್ಮಿಷ್ಠ ಮುಖರ್ಜಿ ಬರೆದು ಮುಗಿಸಿದ್ದು, ಅದರ ಬಿಡುಗಡೆ ಸಂದರ್ಭದಲ್ಲಿ ಕೃತಿಯಲ್ಲಿ ಕೆಲ ಅಂಶಗಳನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಜಗಳದ ಸುಮಾರು ನಾಲ್ಕು ದಿನಗಳ ನಂತರ ಪ್ರತಿಕ್ರಿಯಿಸಿದ ತಂದೆ, ಈ ದೇಶವೇ ನಮಗೆ ಇಂಥದ್ದೊಂದು ಅವಕಾಶ ನೀಡಿದೆ. ಪ್ರಜಾಪ್ರಭುತ್ವ ಎಂಬುದರ ಅರ್ಥವೇ ಮಾತುಕತೆ. ವಿರೋಧಪಕ್ಷದವರೊಂದಿಗೆ ಏನೇ ವಿವಾದವಿದ್ದರೂ ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂಬುದು ತನ್ನ ನಂಬಿಕೆ ಎಂದು ಹೇಳಿದ್ದರು ಎಂದು ಶರ್ಮಿಷ್ಠ ಹೇಳಿದ್ದಾರೆ

ತಂದೆ ಯಾರನ್ನೂ ಓಲೈಸುವ ಮನೋಭಾವದವರಲ್ಲದ ಕಾರಣ ರಾಜೀವ್ ಗಾಂಧಿ ಅವರು ತಮ್ಮ ಸಂಪುಟದಲ್ಲಿ ಅವಕಾಶ ನೀಡಲಿಲ್ಲ. ಆದರೆ ಇಂದಿರಾ ಗಾಂಧಿ ಅವರೊಂದಿಗೆ ಕೆಲಸ ಮಾಡಿದ ದಿನಗಳು ಸುವರ್ಣ ಕಾಲ ಎಂದು ತಂದೆ ಸದಾ ಹೇಳುತ್ತಿದ್ದರು ಎಂದು ಶರ್ಮಿಷ್ಠ ಮುಖರ್ಜಿ ಹೇಳಿದ್ದಾರೆ.

ತಂದೆಯವರು ಬರೆಯುತ್ತಿದ್ದ ಡೈರಿ ಆಧರಿಸಿ ಈ ಪುಸ್ತಕವನ್ನು ರಚಿಸಲಾಗಿದೆ. ಅವರ ಜನ್ಮದಿನದ ಅಂಗವಾಗಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಹಾಗೂ ಬಿಜೆಪಿ ಮುಖಂಡ ವಿಜಯ ಗೋಯಲ್ ಇದ್ದರು ಎಂದೂ ಶರ್ಮಿಷ್ಠ ಹೇಳಿದ್ದಾರೆ.

ಪುಸ್ತಕದಲ್ಲಿ ವಿವಾದಾತ್ಮಕ ಎನ್ನಬಹುದಾದ ರಾಹುಲ್ ಗಾಂಧಿ ಕುರಿತ ಕೆಲ ಸಂಗತಿಗಳ ಕುರಿತು ಕೂಡ ಶರ್ಮಿಷ್ಠ ಬೆಳಕು ಹೇಳಿಕೊಂಡಿದ್ದು, 2013ರ ಸೆಪ್ಟೆಂಬರ್‌ನಲ್ಲಿ ಪ್ರಸ್ತಾಪವಾಗಿದ್ದ ಸುಗ್ರೀವಾಜ್ಞೆಯನ್ನು ತಂದೆಯವರು ವಿರೋಧಿಸಿದ್ದರು. ಇಂಥ ವಿಷಯಗಳು ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದು ತಂದೆಯವರು ಬಯಸಿದ್ದರು. ಆದರೆ ಸುದ್ದಿಗೋಷ್ಠಿಯೊಂದರಲ್ಲಿ ರಾಹುಲ್ ಗಾಂಧಿ ಪ್ರತಿಯನ್ನು ಹರಿದುಹಾಕಿದ್ದರು ಎಂದಿದ್ದಾರೆ.

ಶಿಕ್ಷೆಗೆ ಗುರಿಯಾದ ಸಂಸದರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಸುಪ್ರೀಂ ಕೋರ್ಟ್‌ನ ಆದೇಶವನ್ನು ಸುಗ್ರೀವಾಜ್ಞೆ ಉಲ್ಲಂಘಿಸುವಂತಿತ್ತು. ಆದರೆ ಮೇಲಿನ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ಸದಸ್ಯರು ತಮ್ಮ ಸ್ಥಾನದಲ್ಲಿ ಮುಂದುವರಿಯಬಹುದು ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿತ್ತು ಎಂದು ಮಾಜಿ ರಾಷ್ಟ್ರಪತಿ ಪುತ್ರಿ ಹೇಳಿದ್ದಾರೆ.

ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಒಂದು ತಂಡವಾಗಿ ಅವರು ಕೆಲಸ ಮಾಡಿದ್ದನ್ನು ಸದಾ ನೆನಪಿಸಿಕೊಳ್ಳುತ್ತಿದ್ದರು ಎಂದು ಹೇಳಿದ ಶರ್ಮಿಷ್ಠ ಮುಖರ್ಜಿ, ರಾಹುಲ್ ಗಾಂಧಿ ಕುರಿತು ಕೆಲವೇ ಕೆಲವು ಅಂಶಗಳು ಮಾತ್ರ ಪುಸ್ತಕದಲ್ಲಿ ದಾಖಲಾಗಿವೆ. ಸಂಸತ್ತಿನಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ್ದೇ ಕಾಂಗ್ರೆಸ್‌ ಪಕ್ಷ. ಅದನ್ನು ಉಳಿಸಿಕೊಳ್ಳುವುದು ಪಕ್ಷದ ಕೈಯಲ್ಲಿದೆ ಎಂದು ತಂದೆಯವರು ಸದಾ ಹೇಳುತ್ತಿದ್ದರು ಎಂದೂ ಹೇಳಿದ್ದಾರೆ.

Join Whatsapp
Exit mobile version