ಬೆಂಗಳೂರು: ಸಂಭಾಜಿ ರಾವ್ ಬಿಢೆಯ ಕಾಲಿಗೆ ನಮಸ್ಕರಿಸುವಾಗ ನನಗೆ ಅವರ ಪರಿಚಯವಿರಲಿಲ್ಲ ಎಂದು ಸುಧಾಮೂರ್ತಿ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇತ್ತಿಚೆಗೆ ಇನ್ಫೋಸಿಸ್ ಸಹ-ಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಬಲಪಂಥೀಯ ನಾಯಕ ಸಂಭಾಜಿ ರಾವ್ ಭಿಡೆ ಅವರ ಕಾಲಿಗೆ ನಮಸ್ಕರಿಸಿದ್ದ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು.
ಈ ಕುರಿತು ಹೇಳಿಕೆ ನೀಡಿದ ಸುಧಾ ಮೂರ್ತಿ, ಮೊದಲು ನನಗೆ ಭಿಡೆ ಅವರ ಅವರ ಪರಿಚಯವಿರಲಿಲ್ಲ. ಹಿರಿಯರಾಗಿದ್ದ ಅವರನ್ನು ಗೌರವಿಸುವ ಸಲುವಾಗಿ ನಾನು ಅವರಿಗೆ ನಮಸ್ಕರಿಸಿದ್ದೆ ಎಂದು ಹೇಳಿದ್ದಾರೆ.
ಪತ್ರಕರ್ತೆಯೊಬ್ಬರು ಬಿಂದಿ ಧರಿಸದೆ ಇದ್ದ ಕಾರಣ ಅವರನ್ನು ಅವಮಾನಿಸಿದ್ದ ಬಿಢೆ ಅವರ ನಡೆ ಇತ್ತೀಚೆಗೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.