Home ಟಾಪ್ ಸುದ್ದಿಗಳು ನಾನು ಮನಸು ಮಾಡಿದರೆ ಜನಾರ್ದನ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸಬಲ್ಲೆ: ಶಿವರಾಜ್ ತಂಗಡಗಿ

ನಾನು ಮನಸು ಮಾಡಿದರೆ ಜನಾರ್ದನ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸಬಲ್ಲೆ: ಶಿವರಾಜ್ ತಂಗಡಗಿ

ಕೊಪ್ಪಳ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಸಚಿವ ಶಿವರಾಜ್​ ತಂಗಡಗಿ ನಡುವೆ ವಾಕ್ಸಮರ ಜೋರಾಗಿದೆ. ರೆಡ್ಡಿಯ ‘ಕಂತ್ರಿ’ ಹೇಳಿಕೆಗೆ ತಿರುಗೇಟು‌ ನೀಡಿದ ಶಿವರಾಜ್ ತಂಗಡಗಿ, ನಾನು ಮನಸ್ಸು ಮಾಡಿದರೆ ರೆಡ್ಡಿ ಇತಿಹಾಸ ಬಿಚ್ಚಿಡುತ್ತೇನೆ. ನನ್ನ ವೈಯಕ್ತಿಕ ಬದುಕಿನ ವಿಚಾರಗಳ ಬಗ್ಗೆ ಮಾತನಾಡಿದರೆ ನಿಮ್ಮನ್ನು ಎಲ್ಲಿ ಬೇಕಾದರೂ ಬೆತ್ತಲೆಯಾಗಿ ನಿಲ್ಲಿಸುವೆ ಎಂದು ಹೇಳಿದ್ದಾರೆ.

ಇತ್ತಿಚಿಗೆ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ವೇಳೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನರೇಂದ್ರ ಮೋದಿ ಹೆಸರು ಹೇಳುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿರುವ ಸಚಿವ ಶಿವರಾಜ ತಂಗಡಗಿಯನ್ನು ಮಂತ್ರಿ ಎನ್ನಬೇಕೊ, ಕಂತ್ರಿ ಎನ್ನಬೇಕೋ ಎಂದು ಪ್ರಶ್ನಿಸಿದ್ದರು.

ಜನಾರ್ದನ ರೆಡ್ಡಿ ಅವರ ಈ ಹೇಳಿಕೆ ಆಡಳಿತ ಮತ್ತು ವಿಪಕ್ಷದವರ ನಡುವೆ ಮಾತಿನ ಚಕಮಕಿಗೆ ಕಾರಣಾವಾಗಿತ್ತು.

Join Whatsapp
Exit mobile version