Home ಟಾಪ್ ಸುದ್ದಿಗಳು ನಾನು ಈಗಲೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ: ಸಿಎಂ ಇಬ್ರಾಹಿಂ

ನಾನು ಈಗಲೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ: ಸಿಎಂ ಇಬ್ರಾಹಿಂ

ಬೆಂಗಳೂರು: ನಾನು ಈಗಲೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷನೇ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.


ಕುಮಾರಸ್ವಾಮಿ ಅವರನ್ನು ರಾಜ್ಯ ಘಟಕದ ಅಧ್ಯಕ್ಷರಾಗಿ ಮಾಡಿದ್ದು ಮೊದಲ ತಪ್ಪು. ಅಮಾನತು ಮಾಡಲು ನನಗೆ ನೋಟಿಸ್ ಕೊಟ್ಟಿದ್ದಾರಾ ಎಂದು ಅವರು ಪ್ರಶ್ನಿಸಿದ್ದಾರೆ.


ಅಮಾನತು ಮಾಡುವ ಬಗ್ಗೆ ನನಗೆ ನೋಟಿಸ್ ಕೊಟ್ಟಿಲ್ಲ. ನಾನೇನು ಅವರ ಮನೆ ಕೆಲಸದವನಾ? ಏನು ಇವರ ಹುಚ್ಚಾಟ? ಈ ಬಗ್ಗೆ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
ಎಲ್ಲೋ ರೆಸಾರ್ಟ್ ನಲ್ಲಿ 8ರಿಂದ 10 ಜನ ಸಭೆ ಮಾಡುವುದಲ್ಲ. ನ್ಯಾಷನಲ್ ಕೌನ್ಸಿಲ್ ಮೆಂಬರ್ನಲ್ಲಿ 26 ಜನ ಇವರ ಮನೆಯವರೇ ಇದ್ದಾರೆ ಎಂದು ದೇವೇಗೌಡರು ಹಾಗೂ ಕುಮಾರಸ್ವಾಮಿ ವಿರುದ್ಧ ಇಬ್ರಾಹಿಂ ಕಿಡಿ ಕಾರಿದ್ದಾರೆ.

Join Whatsapp
Exit mobile version